ಕೇವಲ 2 ಗಂಟೆಯಲ್ಲಿ ಓಮಿಕ್ರಾನ್ ಪತ್ತೆ ಮಾಡುವ ಕಿಟ್ ಅಭಿವೃದ್ಧಿ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ತ್ವರಿತವಾಗಿ ಸೋಂಕು ಪತ್ತೆಗೆ ಕ್ರಮವಹಿಸಲಾಗಿದ್ದು, ಸೋಂಕಿತರ ಮಾದರಿಗಳಿಂದ ಕೇವಲ 2 ಗಂಟೆಯಲ್ಲಿ ಓಮಿಕ್ರಾನ್ ಪತ್ತೆ ಮಾಡುವ ಕಿಟ್ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಭಿವೃದ್ಧಿಪಡಿಸಿದೆ.

OMICRON Karnataka

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿಟ್‍ಗಳಿಂದ ಓಮಿಕ್ರಾನ್ ಸೋಂಕು ಪತ್ತೆಗೆ ಕನಿಷ್ಠ 3-4 ದಿನಗಳು ಬೇಕಾಗುತ್ತದೆ. ಸೋಂಕು ಪತ್ತೆಯನ್ನು ಮತ್ತಷ್ಟು ತ್ವರಿತಗೊಳಿಸುವ ಉದ್ದೇಶದಿಂದ ಅತ್ಯಾಧುನಿಕ ಕಿಟ್ ಅಭಿವೃದ್ಧಿಪಡಿಸಲಾಗಿದೆ. ಈ ಕಿಟ್ ಅನ್ನು ವಿಜ್ಞಾನಿ ಬಿಸ್ವಜ್ಯೋತಿ ಬೊರ್ಕಕೋಟಿ ನೇತೃತ್ವದ ಐಸಿಎಂಆರ್-ಆರ್‌ಎಂಆರ್‌ಸಿ ತಂಡ ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ಮಾರ್ಚ್, ಮೇ ಹೊತ್ತಿಗೆ ದೇಶದಲ್ಲಿ ಕೊರೊನಾ ಇರಲ್ಲ: ವಿನಯ್ ಗುರೂಜಿ

ಡಿಬ್ರೂಗಡದ ಐಸಿಎಂಆರ್-ಆರ್‌ಎಂಆರ್‌ಸಿ ಓಮಿಕ್ರಾನ್ ತಳಿಯ ಪತ್ತೆಗಾಗಿ ಆರ್‍ಟಿ-ಪಿಸಿಆರ್ ಪರೀಕ್ಷೆಯ ಕಿಟ್ ಅನ್ನು ವಿನ್ಯಾಸಗೊಳಿಸಿದೆ. ಈ ಕಿಟ್ ಕೇವಲ 2 ಗಂಟೆಯಲ್ಲಿ ಹೊಸ ತಳಿಯನ್ನು ಪತ್ತೆ ಮಾಡಲಿದೆ ಎಂದು ವಿಜ್ಞಾನಿ ಡಾ.ಬಿಸ್ವಜ್ಯೋತಿ ತಿಳಿಸಿದ್ದಾರೆ.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೋಲ್ಕತ್ತಾ ಮೂಲದ ಜಿಸಿಸಿ ಬಯೋಟೆಕ್ ಕಂಪೆನಿಯು ಕಿಟ್ ಅನ್ನು ತಯಾರಿಸುತ್ತಿದೆ. ಕೊರೊನಾ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಿದಾಗ ಓಮಿಕ್ರಾನ್‍ನ ನಿರ್ದಿಷ್ಟ ಸಿಂಥೆಟಿಕ್ ಜೀನ್ ತುಣುಕುಗಳಿರುವುದನ್ನು ಕಿಟ್ ಪತ್ತೆ ಮಾಡಿದೆ. ಇದರಿಂದ ಶೇ. 100ರಷ್ಟು ಫಲಿತಾಂಶವನ್ನು ಕಿಟ್ ನೀಡುತ್ತದೆ ಎಂಬುದು ಪರಿಶೀಲನೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ: ಮುಂಬೈನಲ್ಲಿ 144 ಸೆಕ್ಷನ್ ಜಾರಿ- ರ‍್ಯಾಲಿ, ಮೆರವಣಿಗೆಗೆ ನಿಷೇಧ

ದೇಶದಲ್ಲಿ ಈವರೆಗೆ ಒಟ್ಟು 33 ಓಮಿಕ್ರಾನ್ ಪ್ರಕರಣಗಳಿವೆ.

Comments

Leave a Reply

Your email address will not be published. Required fields are marked *