ಕೊನೆಗೂ ರಿವೀಲ್ ಆಯ್ತು ಬಿಗ್ ಬಾಸ್ ರೇಡಿಯೋ ಧ್ವನಿ

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಬೆಳಗ್ಗೆ ಬಿಗ್ ಬಾಸ್ ರೇಡಿಯೋದಲ್ಲಿ ಕೇಳುವ ಧ್ವನಿ ಯಾರದ್ದು ಎನ್ನುವುದು ಈಗ ರಿವೀಲ್ ಆಗಿದೆ.

ಕನ್ನಡದ ಬಿಗ್ ಬಾಸ್ ಸೀನನ್-1ರಿಂದ 6ರವರೆಗೆ ಬಿಗ್ ಹೌಸ್‍ನಲ್ಲಿ ಸ್ಪರ್ಧಿಗಳ ಗಾಸಿಪ್, ಜಗಳ, ಮನರಂಜನೆ, ವೀಕೇಂಡ್ ನಲ್ಲಿ ಕಿಚ್ಚ ಸುದೀಪ್ ಜೊತೆ ಮಾತಿನ ಕಲರವ ಪ್ರೇಕ್ಷಕರನ್ನು ರಂಜಿಸಿತ್ತು. ಆದರೆ ಬಿಗ್ ಬಾಸ್ ಸೀಸನ್-7ರಲ್ಲಿ ಸಾಕಷ್ಟು ಹೊಸ ಎಲಿಮೆಂಟ್‍ಗಳು ಸೇರಿದೆ. ಅದರಲ್ಲಿ ಬಿಗ್ ಬಾಸ್ ರೇಡಿಯೋ ಕೂಡ ಒಂದು. ಬಿಗ್ ಬಾಸ್ ಧ್ವನಿ ಬಿಟ್ಟು ಸ್ಪರ್ಧಿಗಳು ಅಲರ್ಟ್ ಆಗುವ ಧ್ವನಿ ಎಂದರೆ ಅದು ಬಿಗ್ ಬಾಸ್ ರೇಡಿಯೋದಲ್ಲಿ ಕೇಳಿಬರುವ ಧ್ವನಿಗೆ ಮಾತ್ರ.

ಬಿಗ್ ಬಾಸ್ ಮನೆಯ ಬಿಗ್ ರೇಡಿಯೋದಲ್ಲಿ ಬರುವ ಧ್ವನಿ ಯಾರದ್ದು ಎನ್ನುವುದು ಈಗ ರಿವಿಲ್ ಆಗಿದೆ. ಆ ಧ್ವನಿ ಬೇರೆಯಾದದ್ದೂ ಅಲ್ಲ, ಅದು ಆರ್‌ಜೆ ಶ್ರದ್ಧಾ ಅವರದ್ದು. ಇಂಜಿನಿಯರಿಂಗ್ ಓದಿರುವ ಶ್ರದ್ಧಾ ಅವರು ತಮ್ಮ ಐಟಿ ಜಾಬ್ ಬಿಟ್ಟು ಆರಿಸಿಕೊಂಡಿದ್ದು ರೇಡಿಯೋ ಜಾಕಿ ವೃತ್ತಿಯನ್ನು. ಆರ್‍ಜೆ ಆದ ಮೇಲೆ ರೇಡಿಯೋದಲ್ಲಿ ಶ್ರದ್ಧಾ ಅವರು ತಮ್ಮ ಸ್ವೀಟ್ ವಾಯ್ಸ್ ನಿಂದ ಕೇಳುಗರನ್ನು ಮನರಂಜಿಸುತ್ತಿದ್ದರು. ಕೇವಲ ಆರ್‌ಜೆ ಆಗಿ ಮಾತ್ರವಲ್ಲ ಶ್ರದ್ಧಾ ನಿರೂಪಕಿಯಾಗಿಯೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡ್ಯಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಶ್ರದ್ಧಾ ನಿರೂಪಣೆ ಮಾಡಿ ಕಮಾಲ್ ಮಾಡಿದ್ದರು. ಅಕುಲ್ ಬಾಲಾಜಿ ಜೊತೆ ಕೋ-ಹೋಸ್ಟ್ ಆಗಿ ಶ್ರದ್ಧಾ ಮಿಂಚಿದ್ದರು. ಸದ್ಯ ಶ್ರದ್ಧಾ ಅವರು ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಾನ್ ಫಿಕ್ಷನ್ ಟೀಮ್ ಒಂದರಲ್ಲಿ ಪ್ರೊಗ್ರಾಮಿಂಗ್ ಹೆಡ್ ಆಗಿ ಕಾರ್ಯನಿರ್ವಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *