`ಕಾಂತಾರ’ (Kantara Film) ಸೂಪರ್ ಸಕ್ಸಸ್ ನಂತರ ರಿಷಬ್ ಶೆಟ್ಟಿ (Rishab Shetty) ಮತ್ತಷ್ಟು ಬ್ಯುಸಿಯಾಗಿದ್ದಾರೆ. ಆದರೆ ಇದೀಗ ರಶ್ಮಿಕಾ (Rashmika Mandanna) ಮಾತಿಗೆ ಟಕ್ಕರ್ ಕೊಡುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮೊದಲ ಚಿತ್ರದ ಬಗ್ಗೆ ಕೇಳಿದಾಗ ಕೈ ಸನ್ನೆ ಮಾಡಿದ್ದ ರಶ್ಮಿಕಾಗೆ, ರಿಷಬ್ ತಿರುಗೇಟು ನೀಡಿದ್ದಾರೆ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ `ಕಾಂತಾರ’ ಸಕ್ಸಸ್ ಅಲೆಯಲ್ಲಿ ತೆಲುತ್ತಿದ್ದಾರೆ. ಈ ಬೆನ್ನಲ್ಲೇ ಸಾಕಷ್ಟು ಸಂದರ್ಶನ ಕೊಡುವುದರಲ್ಲಿ ಬ್ಯುಸಿಯಾಗಿದ್ದಾರೆ. ರಿಷಬ್‌ಗೆ ಸಂದರ್ಶನವೊಂದರಲ್ಲಿ ರಶ್ಮಿಕಾ, ಕೀರ್ತಿ ಸುರೇಶ್, ಸಮಂತಾ, ಸಾಯಿಪಲ್ಲವಿ ಈ ನಾಲ್ವರಲ್ಲಿ ಯಾರ ಜೊತೆ ನಟಿಸಲು, ಕೆಲಸ ಮಾಡಲು ಇಷ್ಟ ಎಂದು ಕೇಳಿದ್ದಾರೆ. ಎಲ್ಲಿಯೂ ಕೂಡ ರಶ್ಮಿಕಾ ಹೆಸರನ್ನ ಪ್ರಸ್ತಾಪಿಸದೇ ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ಯೋಚಿಸುತ್ತೇನೆ. ಹೊಸ ಕಲಾವಿದರ ಜೊತೆ ನಟಿಸೋಕೆ ಇಷ್ಟಪಡ್ತೀನಿ. ನೀವು ಹೇಳಿದ ಹೆಸರುಗಳಲ್ಲಿ (ಕೋಟ್ ರೀತಿಯಲ್ಲಿ ಸನ್ನೆ ಮಾಡಿ) ನಟಿಯರು ನನಗೆ ಇಷ್ಟ ಇಲ್ಲ. ಸಮಂತಾ, ಸಾಯಿಪಲ್ಲವಿ ಅಭಿನಯ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಈ ಮೂಲಕ ರಶ್ಮಿಕಾ ಸ್ಟೈಲಿನಲ್ಲಿಯೇ ರಿಷಬ್ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ:ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣಗೆ ತಮ್ಮ ಮೊದಲ ಚಿತ್ರದಲ್ಲಿ ಆಫರ್ ಸಿಕ್ಕ ಬಗ್ಗೆ ಕೇಳಲಾಗಿತ್ತು. ಕಿರಿಕ್ ಪಾರ್ಟಿ ಚಿತ್ರದ ಹೆಸರನ್ನು ಹೇಳಲು ಹಿಂದೇಟು ಹಾಕಿದ್ದರು. ನಾನು ಕಾಲೇಜಿನಲ್ಲಿ ಓದುತ್ತಿದ್ದೆ ಆ ಸಮಯದಲ್ಲಿ ʻಕಿರಿಕ್ ಪಾರ್ಟಿʼ ತಂಡ ನನ್ನ ಬಳಿ ನಟಿಸುವಂತೆ ಕೇಳಿಕೊಂಡಿತ್ತು ಅಂತಾ ಹೇಳಿದ್ದರು. ಆಗ ರಶ್ಮಿಕಾ, ʻಕಿರಿಕ್ ಪಾರ್ಟಿʼ ಚಿತ್ರದ ಹೆಸರನ್ನು ಹೇಳದೇ ಸನ್ನೆ ಮೂಲಕ ಕೈ ತೋರಿಸಿದ್ದರು. ಅಭಿಮಾನಿಗಳು ನಟಿಯ ವಿರುದ್ಧ ಅಸಮಾಧಾನಗೊಂಡಿದ್ದರು.

ರಿಷಬ್ ನಿರ್ದೇಶನದ `ಕಿರಿಕ್ ಪಾರ್ಟಿ’ಯಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ನಟಿಸಿದ್ದರು. ತಮ್ಮ ಮೊದಲ ಚಿತ್ರದ ಹೆಸರನ್ನು ಹೇಳಲು ಹಿಂದೇಟು ಹಾಕುತ್ತಿದ್ದ ನಟಿಗೆ ಇದೀಗ ರಿಷಬ್ ಶೆಟ್ಟಿ ಸನ್ನೆ ಮೂಲಕವೇ ಖಡಕ್ ಆಗಿ ಕೌಂಟರ್ ಕೊಟ್ಟಿದ್ದಾರೆ. ರಿಷಬ್ ಉತ್ತರಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

Leave a Reply