ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ಸದ್ಯ ತಮ್ಮ ಮಗಳ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಮುದ್ದು ಮಗಳು ರಾಧ್ಯಳ (Raadya) ಹುಟ್ಟುಹಬ್ಬಕ್ಕೆ (Birthday) ಚಿತ್ರರಂಗದ ತಾರೆಯರು, ರಾಜಕಾರಣಿಗಳು ಸಾಕ್ಷಿಯಾಗಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮುಂಬೈನಲ್ಲಿ ‘ಕಬ್ಜ’ ಹವಾ : ಬಾಲಿವುಡ್ ನಲ್ಲಿ ಉಪೇಂದ್ರ, ಸುದೀಪ್ ರೋಡ್ ಶೋ

`ಕಾಂತಾರ’ (Kantara) ಚಿತ್ರದ ಸೂಪರ್ ಸಕ್ಸಸ್ ನಂತರ ಫ್ಯಾಮಿಲಿ ರಿಷಬ್ ಸಮಯ ನೀಡ್ತಿದ್ದಾರೆ. ಕಾಂತಾರ ಪಾರ್ಟ್ 2 ಸ್ಕ್ರಿಪ್ಟ್ ವರ್ಕ್ ಮಧ್ಯೆ ಮುದ್ದಿನ ಮಗಳು ರಾಧ್ಯಳಿಗೆ 1 ವರ್ಷ ಪೂರೈಸಿದ ಬೆನ್ನಲ್ಲೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಿದ್ದಾರೆ.

ರಿಷಬ್ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೋಹಕತಾರೆ ರಮ್ಯಾ (Ramya), ರವಿಚಂದ್ರನ್ ಕುಟುಂಬ, ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಹೊಂಬಾಳೆ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು ಕುಟುಂಬ, ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಕ್‌ಲೈನ್ ವೆಂಕಟೇಶ್, ಸೃಜನ್ ಲೋಕೇಶ್ ಹೀಗೆ ಸಾಕಷ್ಟು ಸೆಲೆಬ್ರಿಗಳು ಭಾಗಿಯಾಗಿದ್ದಾರೆ.

ಬರ್ತ್‌ಡೇ ತಾರೆಯರು ಮಾತ್ರವಲ್ಲ ರಾಜಕಾರಣಿಗಳು ಕೂಡ ಭಾಗವಹಿಸಿದ್ದರು. ಡಿಕೆಶಿ, ಸಿಟಿ ರವಿ, ಆರ್.ಅಶೋಕ್, ಪ್ರತಾಪ ಸಿಂಹ, ಅಶ್ವಥ್ ನಾರಾಯಣ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ರಿಷಬ್ ಮಗಳಿಗೆ ಹಾರೈಸಿದರು. ಸದ್ಯ ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ರಿಷಬ್‌ ಶೆಟ್ಟಿ ಸದ್ಯ ʻಕಾಂತಾರ 2ʼಗಾಗಿ ಕಥೆ ರೆಡಿ ಮಾಡ್ತಿದ್ದಾರೆ. ಅದಕ್ಕಾಗಿ ಅಧ್ಯಯನ ನಡೆಸುತ್ತಿದ್ದಾರೆ. ತಯಾರಿಯ ಬಳಿಕ ಶೂಟಿಂಗ್‌ ಶುರುವಾಗಲಿದೆ.

Comments

Leave a Reply

Your email address will not be published. Required fields are marked *