`ಕಾಂತಾರ’ ಪಾರ್ಟ್‌ 2ಗೆ ಪಂಜುರ್ಲಿ ಮೊರೆ ಹೋದ ರಿಷಬ್ ಶೆಟ್ಟಿ

`ಕಾಂತಾರ’ (Kantara) ಸೂಪರ್ ಸಕ್ಸಸ್ ನಂತರ ಮತ್ತೆ ಚಿತ್ರತಂಡ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ರಿಷಬ್ ನಟನೆ, ನಿರ್ದೇಶನದ ಕಾಂತಾರ ಅದ್ಭುತ ಯಶಸ್ಸನ್ನು ಕಂಡಿದೆ. ಈಗ ಪಾರ್ಟ್ 2ಗಾಗಿ ತಯಾರಿ ನಡೆಸುವ ಮುಂಚೆ ಅಣ್ಣಪ್ಪ ಪಂಜುರ್ಲಿ (Annappa Panjurli) ದೈವದ ಹರಕೆ ಕೋಲ ಮಾಡಿ, ಅನುಮತಿ ಕೇಳಿದ್ದಾರೆ.

ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಸಿನಿಮಾ ಅಂದ್ರೆ `ಕಾಂತಾರ’ ಚಿತ್ರ. ಈ ಸಿನಿಮಾ ನೋಡಿ ಫಿದಾ ಆಗಿರುವ ಅಭಿಮಾನಿಗಳು ಪಾರ್ಟ್ 2ಗಾಗಿ ಕಾಯ್ತಿದ್ದಾರೆ. ಈ ಬೆನ್ನಲ್ಲೇ ರಿಷಬ್ (Rishab Shetty) ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು (Vijay Kiragandoor) ಸೇರಿದಂತೆ ಇಡೀ ಚಿತ್ರತಂಡ ಮಂಗಳೂರಿನಲ್ಲಿ ಅಣ್ಣಪ್ಪ ಪಂಜುರ್ಲಿಗೆ ದೈವದ ಹರಕೆ ನೀಡಿದ್ದಾರೆ. ಕದ್ರಿ ಮಂಜುನಾಥೇಶ್ವರ ಪ್ರಧಾನ ಅರ್ಚಕ ಕೃಷ್ಣ ಅಡಿಗ ಸಮ್ಮುಖದಲ್ಲಿ ದೈವ ಕೋಲ ನಡೆದಿದೆ. ಈ ವೇಳೆ ಕಾಂತಾರ ಪಾರ್ಟ್ 2 ಮಾಡಲು ಅನುಮತಿ ಕೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್

ಪಂಜುರ್ಲಿ ದೈವವು ಕೂಡ `ಕಾಂತಾರ 2′ ಮಾಡಲು ಅನುಮತಿ ನೀಡಿದೆ. ಜೊತೆಗೆ ಕೆಲವು ಸಲಹೆ ಮತ್ತು ಎಚ್ಚರಿಕೆಗಳನ್ನ ಕೂಡ ನೀಡಿದೆ. ಪಾರ್ಟ್ 2ನಲ್ಲಿ ಈ ಹಿಂದಿನ ಕಲಾವಿದರೇ ಮುಂದುವರೆಯಲಿದ್ದಾರೆ. ಇನ್ನೂ ಕಾಂತಾರ ಸಿನಿಮಾ ತಂಡದ ಜೊತೆ ರಿಷಬ್ ಕುಟುಂಬ ಕೂಡ ಕೋಲ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ಇದೀಗ `ಕಾಂತಾರ’ ಮುಂದುವರೆದ ಭಾಗಕ್ಕೆ ದೈವ ಕೂಡ ಸೂಚನೆ ನೀಡಿದೆ. ಪಾರ್ಟ್ 2 ಕೂಡ ಅದೆಷ್ಟರ ಮಟ್ಟಿಗೆ ಹವಾ ಕ್ರಿಯೆಟ್ ಮಾಡಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *