ಭರ್ಜರಿ 5 ಸಿಕ್ಸ್‌ – ಮಹಿ ದಾಖಲೆ ಉಡೀಸ್‌ ಮಾಡಿದ ರಿಂಕು ಕಿಂಗ್‌!

ಅಹಮದಾಬಾದ್‌: ಒಂದೇ ಓವರ್‌ನಲ್ಲಿ ಭರ್ಜರಿ 5 ಸಿಕ್ಸರ್‌ ಸಿಡಿಸುವ ಮೂಲಕ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಆಟಗಾರ ರಿಂಕು ಸಿಂಗ್‌ (Rinku Singh), ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ (MS Dhoni) ಹೆಸರಿನಲ್ಲಿದ್ದ ಐಪಿಎಲ್‌ (IPL 2023) ದಾಖಲೆಯೊಂದನ್ನ ಉಡೀಸ್‌ ಮಾಡಿದ್ದಾರೆ.

ಭಾನುವಾರ ಗುಜರಾತ್‌ ಟೈಟಾನ್ಸ್‌ (Gujarat Taitans) ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯ 6 ಎಸೆತಗಳಲ್ಲಿ ಕೆಕೆಆರ್‌ಗೆ 29 ರನ್‌ಗಳ ಅಗತ್ಯವಿತ್ತು. ಆದರೆ ರಿಂಕು ಸಿಂಗ್ ಬ್ಯಾಟಿಂಗ್‌ ಬಲದಿಂದ ಕೆಕೆಆರ್ ತಂಡವು 31 ರನ್ ಗಳಿಸಿ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ 6, 6, 6, 6, 6 – ನಂಬೋಕಾಗ್ತಿಲ್ಲ ರಿಂಕು ಕಿಂಗ್‌ ಎಂದ ಅನನ್ಯ ಪಾಂಡೆ

ಇದು ಟಿ20 ಇತಿಹಾಸದಲ್ಲೇ ಚೇಸಿಂಗ್ ವೇಳೆ ಕೊನೆಯ ಓವರ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ರನ್ ದಾಖಲೆಯಾಗಿದೆ. 2016ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲಿದ್ದ ಮಹೇಂದ್ರ ಸಿಂಗ್ ಧೋನಿ, ಕಿಂಗ್ಸ್‌-XI ಪಂಜಾಬ್ ವಿರುದ್ಧ ಅಕ್ಷರ್‌ ಪಟೇಲ್‌ ಬೌಲಿಂಗ್‌ನಲ್ಲಿ 23 ರನ್ ಗಳಿಸಿದ್ದರು. ಇದು ಐಪಿಎಲ್‌ನಲ್ಲಿ ಕೊನೆಯ ಓವರ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆಯಾಗಿತ್ತು. ಆದರೆ, ರಿಂಕು ಸಿಂಗ್‌ 30 ರನ್‌ ಭಾರಿಸುವ ಮೂಲಕ ಕೊನೆಯ ಓವರ್‌ನಲ್ಲಿ ಕೆಕೆಆರ್‌ಗೆ 31 ರನ್‌ ಲಭ್ಯವಾಗಿದ್ದು, ಐಪಿಎಲ್‌ನಲ್ಲಿ ಹೊಸ ದಾಖಲೆಯಾಗಿದೆ. ಈ ಮೂಲಕ ಧೋನಿ ಅವರ ದಾಖಲೆಯಲ್ಲ ರಿಂಕು ಮುರಿದಿದ್ದಾರೆ. ಇದನ್ನೂ ಓದಿ: IPL 2023: ಪಂಜಾಬ್‌ಗೆ ಪಂಚ್‌ ಕೊಟ್ಟ ಸನ್‌ ರೈಸರ್ಸ್‌ – ಹೈದರಾಬಾದ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

ರಿಂಕು ಸಿಂಗ್ ಸೇರಿದಂತೆ ಐಪಿಎಲ್ ಇತಿಹಾಸದಲ್ಲಿ ಈವರೆಗೆ 4 ಮಂದಿ ಬ್ಯಾಟರ್‌ಗಳು ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಸಿಡಿಸಿದ ಸಾಧನೆ ಮಾಡಿದ್ದಾರೆ. 2012ರಲ್ಲಿ ಕ್ರಿಸ್‌ಗೇಲ್‌ ರಾಹುಲ್‌ ಶರ್ಮಾನ ಅವರ ಬೌಲಿಂಗ್‌ಗೆ, 2020ರಲ್ಲಿ ರಾಹುಲ್ ತೆವಾಟಿಯಾ, ಶೆಲ್ಡನ್ ಕಾಟ್ರೆಲ್ ಅವರ ಬೌಲಿಂಗ್‌ನಲ್ಲಿ, 2021ರಲ್ಲಿ ರವೀಂದ್ರ ಜಡೇಜಾ, ಹರ್ಷಲ್‌ ಪಟೇಲ್‌ ಅವರ ಬೌಲಿಂಗ್‌ನಲ್ಲಿ 5 ಸಿಕ್ಸರ್‌ ಚಚ್ಚಿ ದಾಖಲೆ ಮಾಡಿದ್ದರು. ಇದೀಗ ರಿಂಕು ಸಿಂಗ್‌ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಬಾರಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.