3ನೇ ಮಗುವಿನ ತಾಯಿಯಾದ ಖ್ಯಾತ ಸಿಂಗರ್ ರಿಹಾನಾ

ಗತ್ತಿನಾದ್ಯಂತ ಅಭಿಮಾನಿಗಳನ್ನ ಹೊಂದಿರುವ ರಿಹಾನಾ (Rihanna) ಇದೀಗ ಮೂರನೇ ಮಗುವಿನ ತಾಯಿಯಾಗಿದ್ದಾರೆ. ದೀರ್ಘಕಾಲದ ಸಂಗಾತಿ ಹಾಗೂ ರ‍್ಯಾಪರ್ ಆಸ್ಯಾಪ್ ರಾಕಿ ಅವರೊಂದಿಗಿನ ಸಂಬಂಧದಲ್ಲಿ ಗ್ರ್ಯಾಮಿ ವಿಜೇತ ಸಿಂಗರ್ ರಿಹಾನಾಗೆ ಹೆಣ್ಣು ಮಗುವಿನ (Baby Girl) ಜನನವಾಗಿದೆ.

ಮೊದಲೇ ಇಬ್ಬರು ಗಂಡು ಮಕ್ಕಳನ್ನ ಪಡೆದುಕೊಂಡಿರುವ ರಿಹಾನಾ ಈಗ ಹೆಣ್ಣು ಹುಟ್ಟಿದ್ದಕ್ಕೆ ಭಾರೀ ಖುಷಿಯಿಂದ ಸುದ್ದಿ ಹಂಚಿಕೊಂಡಿರುವ ರಿಹಾನಾ ಈಗ ಫ್ಯಾಮಿಲಿ ಕಂಪ್ಲೀಟ್ ಆಗಿದೆ ಎಂದಿದ್ದಾರೆ. 37 ವರ್ಷದ ಗಾಯಕಿ ರಿಹಾನಾ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧ ಸಂಗೀತಗಾರ್ತಿ ಎಂದು ಹೆಸರು ಪಡೆದುಕೊಂಡಿದ್ದಾರೆ.  ಇದನ್ನೂ ಓದಿ:  ಕಾಂತಾರ ಚಾಪ್ಟರ್-1 ಅಡ್ವಾನ್ಸ್ ಬುಕ್ಕಿಂಗ್ ಓಪನ್ಸ್‌ಗೆ ಮುಹೂರ್ತ ಫಿಕ್ಸ್!

ಸೆಪ್ಟೆಂಬರ್ 13 ರಂದು ಮಗು ಜನಿಸಿರುವ ಬಗ್ಗೆ ಮಾಹಿತಿ ಕೊಟ್ಟು ಮಗುವಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಪಿಂಕ್ ಕಲರ್ ಬಟ್ಟೆ ಧರಿಸಿದ ನವಜಾತ ಶಿಶುವನ್ನು ತೊಟ್ಟಿಲಲ್ಲಿ ಕೂರಿಸುವ ಒಂದು ಚಿತ್ರ ಮತ್ತು ಮಗುವಿನ ಪಿಂಕ್‌ಶೂಗಳ ಇನ್ನೊಂದು ಫೋಟೋ ಹಂಚಿಕೊಂಡಿದ್ದಾರೆ. ರಾಕಿ ಐರಿಶ್ ಮೇಯರ್ಸ್ ಎಂದು ತಮ್ಮ ಮಗಳಿಗೆ ಹೆಸರಿಟ್ಟಿರೋದನ್ನೂ ರಿಹಾನಾ ಬಹಿರಂಗಪಡಿಸಿದ್ದಾರೆ. ಜಗತ್ತಿನಾದ್ಯಂತ ಅಭಿಮಾನಿಗಳು ರಿಹಾನಾಗೆ ಶುಭ ಕೋರುತ್ತಿದ್ದಾರೆ, ಇದನ್ನೂ ಓದಿ:  ಮ್ಯಾಕ್ಸ್ ಡೈರೆಕ್ಟರ್‌ಗೆ ಕಾರ್ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್