ಕಾಲಿವುಡ್‍ನಲ್ಲಿ ಬರ್ತಿದೆ ಉಳಿದವರು ಕಂಡಂತೆ ಸಿನಿಮಾದ ರಿಮೇಕ್

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯಿಸಿರುವ `ಉಳಿದವರು ಕಂಡಂತೆ’ ಸಿನಿಮಾವು ತಮಿಳು ಭಾಷೆಯಲ್ಲಿ ರೀಮೇಕ್ ಆಗಿ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ರಕ್ಷಿತ್ ಶೆಟ್ಟಿಗೆ ಬ್ರೇಕ್ ಕೊಟ್ಟಿದ್ದ ಉಳಿದವರು ಕಂಡಂತೆ ಚಿತ್ರ ತಮಿಳಿನಲ್ಲಿ `ರಿಚಿ’ ಎಂಬ ಟೈಟ್‍ಲ್ ನಲ್ಲಿ ಮೂಡಿಬರುತ್ತಿದೆ. ಇದೀಗ ಚಿತ್ರ ತಂಡ ಚಿತ್ರದ ಮೊದಲ ಟ್ರೇಲರ್ ರಿಲೀಸ್ ಮಾಡಿದೆ. ಚಿತ್ರದಲ್ಲಿ ಮಲಯಾಳಂ ನಟ ನಿವಿನ್ ಪೌಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ತಮಿಳಿನಲ್ಲಿ ಎರಡನೇ ಬಾರಿಗೆ ತಮ್ಮ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ.

ಉಳಿದವರು ಕಂಡಂತೆ ಸಿನಿಮಾದ ರೀತಿಯ ಸಸ್ಪೆನ್ಸ್ ಮತ್ತು ಕುತೂಹಲಕಾರಿಯನ್ನು ಸಿನಿಮಾದಲ್ಲಿ ನೋಡಬಹುದು. ನಟ ನಿವಿನ್ ಪೌಲಿ ಹುಲಿ ಸ್ಟೆಪ್ ಹಾಕಿದ್ದು, ಕನ್ನಡದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದ ಶೀತಲ್ ಶೆಟ್ಟಿ ಪಾತ್ರದಲ್ಲಿ ಯೂ ಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ಇನ್ನೂ ಬಹುಭಾಷಾ ನಟ ಪ್ರಕಾಶ್ ರೈ ಚಿತ್ರದಲ್ಲಿ ಫಾದರ್ ಆಗಿ ಬಣ್ಣ ಹಚ್ಚಿದ್ದಾರೆ.

ಟ್ರೇಲರ್ ರಿಲೀಸ್ ಬಗ್ಗೆ ಪ್ರತಿಕ್ರಿಯಿಸಿರುವ ನಟ ನಿವಿನ್, ನಾನು ನರ್ವಸ್ ಆಗಿಲ್ಲ ಎಕ್ಸೈಟ್ ಆಗಿದ್ದಾನೆ ಎಂದು ಹೇಳಿದ್ದಾರೆ. ಗೌತಮ್ ರಾಮಚಂದ್ರನ್ ನಿರ್ದೇಶನದಲ್ಲಿ `ರಿಚಿ’ ಚಿತ್ರ ಮೂಡಿ ಬರುತ್ತಿದೆ. ಚಿತ್ರದ ನಿರ್ಮಾಪಕರು ಆನಂದ್ ಪಯ್ಯನ್ನೂರ್ ಮತ್ತು ವಿನೋದ್ ಶೋರ್ನುರ್ ಆಗಿದ್ದಾರೆ.

 

 

 

Comments

Leave a Reply

Your email address will not be published. Required fields are marked *