ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ, ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ: ಆರ್‌ಜಿವಿ

ಬಾಲಿವುಡ್‌ನ ವಿವಾದಿತ ನಟಿ ಕಂಗನಾ ನಟಿಸಿರುವ ಇತ್ತೀಚಿನ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡುವುದರಲ್ಲಿ ಸೋತಿದ್ದಾರೆ. ಅವರ ವಿವಾದಾತ್ಮಕ ಹೇಳಿಕೆಗಳೇ ಅವರ ಪಾಲಿಗೆ ಮುಳುವಾಗಿದೆ. ಆದರೂ ಕಂಗನಾಗೆ ಸಿನಿಮಾ ಆರ‍್ಸ್ ಕಿಂಚಿಂತೂ ಕಮ್ಮಿಯಾಗಿಲ್ಲ. ಸದ್ಯ ʻಎಮರ್ಜೆನ್ಸಿʼ ಚಿತ್ರದ ಮೂಲಕ ಸದ್ದು ಮಾಡ್ತಿರುವ ಈ ನಟಿಗೆ ಸ್ಟಾರ್ ಡೈರೆಕ್ಷರ್ ರಾಮ್ ಗೋಪಾಲ್ ವರ್ಮಾ ಅಚ್ಚರಿಯ ಹೇಳಿಕೆ ನೀಡಿ, ಇಂದಿರಾ ಗಾಂಧಿ ವಿಡಿಯೋ ಶೇರ್ ಮಾಡಿ ಕಂಗನಾ ಕುರಿತು ಮಾತನಾಡಿದ್ದಾರೆ.

ಸದ್ಯ ಕಂಗನಾ ರಣಾವತ್ ಗಮನವೆಲ್ಲ ಇಂದಿರಾ ಗಾಂಧಿ ಬಯೋಪಿಕ್‌ನತ್ತ ಇದೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡೆ ಸಿನಿಮಾದಲ್ಲಿ ತಲ್ಲೀನರಾಗಿದ್ದಾರೆ. ಈಗ ಕಂಗನಾ ಕುರಿತು ನಿರ್ದೇಶಕ ಆರ್‌ಜಿವಿ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ. ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ ಅಂತಾ ಆರ್‌ಜಿವಿ ಟ್ವೀಟ್ ಮಾಡಿದ್ದಾರೆ.

1984ರಲ್ಲಿ ಇಂದಿರಾ ಗಾಂಧಿ ನೀಡಿದ ವಿಶೇಷ ವಿಡಿಯೋ ಸಂದರ್ಶನದ ತುಣುಕನ್ನು ಆರ್‌ಜಿವಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಕಾಲದಲ್ಲಿ ಪಂಜಾಬ್‌ನಲ್ಲಿ ಇದ್ದ ಪರಿಸ್ಥಿತಿಯ ಬಗ್ಗೆ ಇಂದಿರಾ ಗಾಂಧಿ ಮಾತನಾಡಿದ್ದರು. ಈ ಸಂದರ್ಶನವನ್ನು ಕಂಡು ಆರ್‌ಜಿವಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ಈ ವಿಡಿಯೋದಲ್ಲಿ ಇಂದಿರಾ ಗಾಂಧಿ ಅವರು ಕಂಗನಾ ರೀತಿ ಮಾಡ್ತಿದ್ದಾರೆ ಎಂದು ರಾಮ್ ಗೋಪಾಲ್ ವರ್ಮಾ ಕ್ಯಾಪ್ಷನ್ ನೀಡಿ, ಮೆಚ್ಚುಗೆ ತಿಳಿಸಿದ್ದಾರೆ. ಇದನ್ನೂ ಓದಿ:ಸಿನಿಮಾಗೆ `ಗುಡ್‌ ಬೈ’ ಹೇಳಲಿದ್ದಾರೆ ರಶ್ಮಿಕಾ ಮಂದಣ್ಣ: ಅಸಲಿ ಕಾರಣವೇನು?

ಇನ್ನು ಆರ್‌ಜಿವಿ ಟ್ವೀಟ್ ನೋಡಿ, ಕಂಗನಾ ರಣಾವತ್ ಸಖತ್ ಖುಷಿ ಆಗಿದ್ದಾರೆ. ಆರ್‌ಜಿವಿ ಅವರ ಈ ಮಾತನ್ನು ಹೊಗಳಿಕೆಯ ರೀತಿ ಅವರು ಸ್ವೀಕರಿಸಿದ್ದಾರೆ. ಇಂದಿರಾ ಗಾಂಧಿ ಪಾತ್ರಕ್ಕೆ ತಮ್ಮ ಆಯ್ಕೆ ಸೂಕ್ತವಾಗಿದೆ ಎಂಬುದನ್ನು ಕಂಗನಾ ಖಚಿತಪಡಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆ ಆದ ಕಂಗನಾ ಫಸ್ಟ್ ಲುಕ್ ನೋಡಿರುವ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿ, ಶುಭಹಾರೈಸಿದ್ದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *