ಮತ್ತಷ್ಟು ರಿಲೀಫ್ ನೀಡಲಾಗುವುದು: ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಕೊರೊನಾ ನಿಯಮಗಳಲ್ಲಿ ಮತ್ತಷ್ಟು ರಿಲೀಫ್ ನೀಡಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಇಂದು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ವರ್ಚುವಲ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ. ಶುಕ್ರವಾರ ಸಭೆ ನಡೆಸಿ ಮತ್ತೆ ವೀಕೆಂಡ್ ಲಾಕ್‍ಡೌನ್ ಬಗ್ಗೆ ಚರ್ಚೆ ಮಾಡುತ್ತೇವೆ. ನಾವು ಡಬ್ಲ್ಯೂಎಚ್‍ಒ, ತಜ್ಞರ ಸಮಿತಿ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸೋಂಕು ಲಕ್ಷಣಗಳು ಕಡಿಮೆ ಆದ ತಕ್ಷಣ ಇರುವ ನಿಯಮಗಳನ್ನು ಸಡಿಲಿಕೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ನೆಗೆಟಿವ್

ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆ. ಬಂದಿದ್ದ ಎಲ್ಲಾ ತಜ್ಞರು ವ್ಯಾಕ್ಸಿನೇಷನ್ ಹಾಗೂ ಟೆಸ್ಟಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಟೆಸ್ಟಿಂಗ್ ಜಾಸ್ತಿ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ತಜ್ಞರೆಲ್ಲರ ಅಭಿಪ್ರಾಯದಂತೆ ಜನವರಿ ಅಂತ್ಯದ ವೇಳೆ ಹೆಚ್ಚಾಗಬಹುದು ಎಂದು ಬೇರೆ ರಾಜ್ಯಗಳ ಬೆಳವಣಿಗೆ, ಹೋಲಿಕೆ ಮಾಡಿ ಈ ರೀತಿ ಹೇಳಿದ್ದಾರೆ. ಸೋಂಕು ಹೆಚ್ಚಳಗೊಂಡು ನಂತರ ಕಡಿಮೆ ಆಗಬಹುದು. ಇದೀಗ ಜಾರಿಯಲ್ಲಿರುವ ನಿಯಮ ಹೀಗೆ ಮುಂದುವರಿಯುತ್ತದೆ. ಶುಕ್ರವಾರದವರೆಗೆ ಯಥಾಸ್ಥಿತಿ ಶುಕ್ರವಾರದ ಬಳಿಕ ಮುಂದಿನ ತೀರ್ಮಾನವನ್ನು ಕಾದು ನೋಡಿ ಎಂದರು. ಇದನ್ನೂ ಓದಿ: ಜನವರಿ 31ರ ವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

Comments

Leave a Reply

Your email address will not be published. Required fields are marked *