ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರ – ವಿಧ್ವಂಸಕ ಕೃತ್ಯಕ್ಕೆ ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಪ್ಲ್ಯಾನ್‌

ಬೆಂಗಳೂರು: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಸಂಘಟನೆಯ ನಿಷೇಧಕ್ಕೆ ಸೇಡು ತೀರಿಸಿಕೊಳ್ಳಲು ಮತ್ತಷ್ಟು ಟೀಂಗಳು ತಯಾರಾಗುತ್ತಿರುವ ವಿಚಾರ ರಾಷ್ಟ್ರೀಯ ತನಿಖಾ ದಳದ (NIA) ತನಿಖೆಯಿಂದ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ (Social Media) ಬೇರೆ ಬೇರೆ ಗುಂಪುಗಳನ್ನು ತೆರೆದು ಪಿಎಫ್‌ಐ ಕಾರ್ಯಕರ್ತರು ಸಕ್ರೀಯವಾಗಿರುವ ವಿಚಾರ ಈಗ ಗೊತ್ತಾಗಿದೆ. ಇದನ್ನೂ ಓದಿ: ಗುರುತಿನ ಪುರಾವೆಗಳಿಲ್ಲದೇ 2,000 ರೂ. ನೋಟುಗಳ ವಿನಿಮಯ – ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳಲು ಪ್ಲ್ಯಾನಿಂಗ್ ಮಾಡಲಾಗಿತ್ತು. ಭಾರತದ ಹಲವು ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸುತ್ತಿದ್ದ ವಿಚಾರ ತನಿಖೆಯ ವೇಳೆ ಪತ್ತೆಯಾಗಿದೆ.

ವಿಧ್ವಂಸಕ ಕೃತ್ಯಕ್ಕೆ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡದಲ್ಲೇ ಪ್ರಮುಖವಾಗಿ ತಯಾರಿ ನಡೆದಿತ್ತು. ಎನ್‌ಐಎ ದಾಳಿ ವೇಳೆ ವ್ಯಕ್ತಿಗಳ ಖಾತೆಗಳಿಗೆ ವಿದೇಶದಿಂದ ಹಣ ಜಮೆ ಆಗಿದ್ದಕ್ಕೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದೆ.