ಅಂಗನವಾಡಿ ಮೇಡಂಗೆ ಫೋನ್ ಕೊಟ್ಟರೆ ಎಲ್ಲ ಆಗುತ್ತಾ: ಬಜೆಟ್ ಬಗ್ಗೆ ರೇವಣ್ಣ ವ್ಯಂಗ್ಯ

ಹಾಸನ: ಅಂಗನವಾಡಿ ಮೇಡಂಗೆ ಫೋನ್ ಕೊಟ್ಟರೆ ಎಲ್ಲ ಆಗುತ್ತಾ ಎಂದು ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಭಾರೀ ಕಡಿತ

ನಗರದಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ, 71ನೇ ವರ್ಷದ ಗಣರಾಜ್ಯೋತ್ಸವ ಆಚರಿಸಿದ್ದೇವೆ. ಆದರೆ ಪ್ರಾಥಮಿಕ ಶಾಲೆಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ನಮ್ಮ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡಲು ಆಗುತ್ತಿಲ್ಲ. ಎಲ್ಲ ಸರ್ಕಾರಿ ಶಾಲೆ ಖಾಸಗಿಯವರ ಹಿಡಿತಕ್ಕೆ ಹೋಗುವ ಸ್ಥಿತಿಯಲ್ಲಿವೆ. ಶಿಕ್ಷಣ ಇಲಾಖೆ ಸಂಪೂರ್ಣ ಖಾಸಗೀಕರಣ ಆಗೋದು ಸತ್ಯ. ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರಣ ಆಗುತ್ತಿದೆ ಎಂದರು. ಇದನ್ನೂ ಓದಿ: ಕೇಂದ್ರ ಬಜೆಟ್ ಮುಖ್ಯಾಂಶಗಳು – LIC ಷೇರು ಮಾರಾಟ

ನಮ್ಮ ಮಕ್ಕಳಿಗೆ ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಸುವ ಗುಣಮಟ್ಟದ ಶಿಕ್ಷಣ ಅಗತ್ಯ. ನಿಮ್ಮ ಬಜೆಟ್‍ನಲ್ಲಿ ಏನಾದರೂ ಮಾಡಿಕೊಳ್ಳಿ. ಹಳ್ಳಿ ಮತ್ತು ಬಡವರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುವ ಘೋಷಣೆ ಮಾಡಿ. ಅಂಗನವಾಡಿ ಮೇಡಂಗೆ ಫೋನ್ ಕೊಟ್ಟರೆ ಎಲ್ಲ ಆಗುತ್ತಾ. ಪ್ರಾಥಮಿಕ ಶಿಕ್ಷಣಕ್ಕೆ ಬಜೆಟ್‍ನ ಕೊಡುಗೆ ಏನು ಎಂದು ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲದೆ ಬರೀ ಬಜೆಟ್‍ನಲ್ಲಿ ಘೋಷಣೆ ಆಗುತ್ತೆ. ಇಂಪ್ಲಿಮೆಂಟ್ ಆಗಲ್ಲ ಎಂದು ರೇವಣ್ಣ ಬಜೆಟ್ ಬಗ್ಗೆ ಅಸಮಾಧಾನ ಹೊರಹಾಕಿದರು.

Comments

Leave a Reply

Your email address will not be published. Required fields are marked *