ಸ್ವಚ್ಛ ಕ್ಯಾಂಪಸ್ ವಿಭಾಗದಲ್ಲಿ ರೇವಾ ವಿವಿಗೆ ದೇಶದಲ್ಲೇ 6ನೇ ರ‍್ಯಾಂಕ್

ಬೆಂಗಳೂರು: ವಿಶಾಲ ಕ್ಯಾಂಪಸ್ ಹೊಂದಿರುವ ರೇವಾ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) `ಸ್ವಚ್ಛ ಕ್ಯಾಂಪಸ್’ಗಾಗಿ 6ನೇ ರ‍್ಯಾಂಕ್ ನೀಡಿ ಪುರಸ್ಕರಿಸಿದೆ.

ಎಂಎಚ್‌ಆರ್‌ಡಿ ರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯಗಳ ಸಮೀಕ್ಷೆ ನಡೆಸಿದ್ದು, ರೇವಾ ವಿಶ್ವವಿದ್ಯಾಲಯವೂ ಸ್ಥಾನ ಗಿಟ್ಟಿಸಿಕೊಂಡಿದೆ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಚಿವ ಪ್ರಕಾಶ್ ಜಾವಡೇಕರ್ ಅವರು ರ‍್ಯಾಂಕಿಂಗ್ ಪ್ರಮಾಣ ಪತ್ರವನ್ನು ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಅವರಿಗೆ ನೀಡಿ ಗೌರವಿಸಿದ್ದಾರೆ.

ಈ ಕುರಿತು ಮಾತನಾಡಿದ ಡಾ.ಪಿ.ಶ್ಯಾಮರಾಜು ಅವರು, ನಮ್ಮ ವಿಶ್ವವಿದ್ಯಾಲಯ ಪರಿಸರ ಸ್ನೇಹಿಯಾಗಿದ್ದು, ಪ್ಲಾಸ್ಟಿಕ್ ಬ್ಯಾನರ್ ಗಳನ್ನು ಬಳಕೆ ನಿಷೇಧಿಸಿದ್ದೇವೆ. ವಿದ್ಯಾರ್ಥಿಗಳ ಸಂಖ್ಯೆ ಅನುಗುಣವಾಗಿ ನಿರ್ಮಿಸಿರುವ ಶೌಚಾಲಯ, ನೀರಿನ ವ್ಯವಸ್ಥೆ, ಮಳೆ ನೀರಿನ ಕೊಯ್ಲು, ಸೌರಶಕ್ತಿ ಬಳಕೆ, ಉದ್ಯಾನ ಪರಿಗಣಿಸಿ ಎಂಎಚ್‌ಆರ್‌ಡಿಯು ರ‍್ಯಾಂಕಿಂಗ್ ನೀಡಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಒಟ್ಟು 6,029 ವಿದ್ಯಾಲಯಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದವು. ಹಲವಾರು ಹಂತಗಳ ಮೂಲಕ 205 ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿತ್ತು. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ), ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಅಧಿಕಾರಿಗಳ ತಂಡ ಕಾಲೇಜುಗಳಿಗೆ ಭೇಟಿ ನೀಡಿ ಕ್ಯಾಂಪಸ್ ಪರಿಶೀಲಿಸಿತ್ತು. ಆ ತಂಡ ಅಂತಿಮವಾಗಿ 51 ಶಿಕ್ಷಣ ಸಂಸ್ಥೆಗಳಿಗೆ ವಿವಿಧ ರೀತಿಯ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *