ಧಾರವಾಡ: ಬೆಳ್ಳಂಬೆಳಗ್ಗೆ ರಿಸರ್ವ್ ಇನ್ಸ್‌ಪೆಕ್ಟರ್ ಬುಲೆರೋ ಜೀಪ್ ಅಪಘಾತಕ್ಕಿಡಾದ ಘಟನೆ ಧಾರವಾಡ ಹೊರವಲಯದ ಕೆಎಂಎಫ್ ಬಳಿ ನಡೆದಿದೆ.

ಇಂದು ಬೆಳ್ಳಗ್ಗೆ ಕರ್ತವ್ಯ ನಿಮಿತ್ತ ಇನ್ಸ್ ಪೆಕ್ಟರ್ ವಿರೇಶ್ ನಾಯಕ ಹುಬ್ಬಳ್ಳಿಗೆ ತೆರಳುವ ವೇಳೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೀಪಿನಲ್ಲಿದ್ದ ಸಿಎಆರ್ ಇನ್ಸ್‌ಪೆಕ್ಟರ್ ವಿರೇಶ ನಾಯಕ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಗ್ರಾಹಕನ ಸೋಗಿನಲ್ಲಿ ಬಂದು ಮೊಬೈಲ್ ಕದ್ದ

ವಿರೇಶ ನಾಯಕ ಹುಬ್ಬಳ್ಳಿಗೆ ತೆರಳುವಾಗ ಕೆಎಂಎಫ್ ಬಳಿ ಹಾಲಿನ ವಾಹನ ಬುಲೆರೋಗೆ ಅಡ್ಡ ಬಂದಿದೆ. ಈ ವೇಳೆ ವಿರೇಶ್ ತಮ್ಮ ವಾಹನ ಡಿಕ್ಕಿಯಾಗದಂತೆ ನಿಯಂತ್ರಿಸಲು ಪ್ರಯತ್ನ ಮಾಡಿದ್ದಾರೆ. ನಿಯಂತ್ರಣ ಸಾಧ್ಯವಾಗದಿದ್ದಾಗ ಹಾಲಿನ ವಾಹನಕ್ಕೆ ಜೀಪ್ ಡಿಕ್ಕಿಯಾಗಿದೆ. ಇದರ ಪರಿಣಾಮ ಇನ್ಸ್‌ಪೆಕ್ಟರ್ ವಿರೇಶ ನಾಯಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸದ್ಯ ಅವರನ್ನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ತನ್ನನ್ನು ಪೋಷಣೆ ಮಾಡುತ್ತಿಲ್ಲವೆಂದು ಮಗನ ಮನೆ ಮುಂದೆ ತಂದೆ ಪ್ರತಿಭಟನೆ

Leave a Reply