ಶಕ್ತಿಧಾಮದ ಮಕ್ಕಳ ಬಸ್ಸಿಗೆ ಶಿವಣ್ಣ ಡ್ರೈವರ್‌!

ಮೈಸೂರು: ಚಂದನವನದ ನಟ ಶಿವರಾಜ್‍ಕುಮಾರ್ ಸ್ವತಃ ಅವರೇ ಬಸ್ಸನ್ನು ಡ್ರೈವ್ ಮಾಡಿ ಶಕ್ತಿಧಾಮದ ಮಕ್ಕಳನ್ನು ರೌಂಡ್ ಹಾಕಿಸಿದ್ದಾರೆ.

ಇಂದು 73ನೇ ಗಣರಾಜ್ಯೋತ್ಸವವಾದ ಹಿನ್ನೆಲೆ ಮೈಸೂರು ಶಕ್ತಿಧಾಮದಲ್ಲಿ ಶಿವರಾಜ್‍ಕುಮಾರ್ ಮತ್ತು ಗೀತಾ ಶಿವರಾಜ್‍ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣಕ್ಕೂ ಮುನ್ನ ಶಿವಣ್ಣ ಶಕ್ತಿಧಾಮದ ಮಕ್ಕಳನ್ನು ಬಸ್ಸಿನಲ್ಲಿ ರೌಂಡ್ ಗೆ ಕರೆದುಕೊಂಡು ಹೋಗಿದ್ದರು. ಮಕ್ಕಳು ಶಿವಣ್ಣನನ್ನು ನೋಡಿ, ಅವರ ರೈಡ್ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವ ಸಂಭ್ರಮ: ಮೋದಿ ಟೋಪಿ, ಶಾಲು ವಿಶೇಷತೆ ಏನು?

ಶಕ್ತಿಧಾಮವು ಅನಾಥ ಮಕ್ಕಳ ಆಶ್ರಯ ತಾಣವಾಗಿದೆ. ಈ ಶಕ್ತಿಧಾಮವನ್ನು ಡಾ.ರಾಜ್‍ಕುಮಾರ್ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದಾರೆ. ದಿ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮೊದಲು ಆಶ್ರಮದ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಆದರೆ ಅವರು ಅಗಲಿದ ನಂತರ ಆಶ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶಿವಣ್ಣ ಮತ್ತು ಗೀತಾ ವಹಿಸಿಕೊಂಡಿದ್ದಾರೆ.

ಅಪ್ಪು ಅಗಲಿದ ನಂತರ ಶಿವಣ್ಣ ಮತ್ತು ಗೀತಾ ಆಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿಯ ನಿರ್ವಹಣೆಯ ಕುರಿತಾಗಿ ವಿಚಾರಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಶಕ್ತಿಧಾಮ ನಿರ್ವಹಣೆ ಕುರಿತಂತೆ ಧರ್ಮದರ್ಶಿಗಳ ಸಭೆ ಮಾಡಿದ್ದರು. ಟ್ರಸ್ಟ್ ಅಧ್ಯಕ್ಷೆ ಗೀತಾ ಶಿವರಾಜ್‍ಕುಮಾರ್ ನೇತೃತ್ವದಲ್ಲಿ ಈ ಸಭೆ ನಡೆದಿತ್ತು. ಸಭೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ, ಮ್ಯಾನೇಂಜಿಂಗ್ ಟ್ರಸ್ಟಿ ಜಯದೇವ್, ಖಜಾಂಚಿ ಸುಮನ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದರು ಇದನ್ನೂ ಓದಿ: ಶಕ್ತಿಧಾಮಕ್ಕೆ ಭೇಟಿಕೊಟ್ಟ ಶಿವರಾಜ್‍ಕುಮಾರ್ ದಂಪತಿ

Comments

Leave a Reply

Your email address will not be published. Required fields are marked *