ಪೊಲೀಸ್ ಕಸ್ಟಡಿಯಲ್ಲಿ ಪವಿತ್ರಾ ಗೌಡ ಧಿಮಾಕು!

ಬೆಂಗಳೂರು: ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ (Police Custody) ಆರೋಪಿ ಪವಿತ್ರಾ ಗೌಡ (Pavithra Gowda) ಧಿಮಾಕು ವರ್ತನೆ ತೋರಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಮನೆಯಲ್ಲಿದ್ದಾಗ  ಹೈಫೈ ಜೀವನ ನಡೆಸುತ್ತಿದ್ದ ಪವಿತ್ರಾ ಗೌಡ ಈಗ ಕಸ್ಟಡಿಯಲ್ಲಿ ಸುಚಿರುಚಿಯ ಬಗ್ಗೆ ಪೊಲೀಸರಿಗೇ ಪ್ರಶ್ನೆ ಕೇಳಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? – ದರ್ಶನ್ ಕೃತ್ಯ ಖಂಡಿಸಿದ ರಮ್ಯಾ

 

ಶುಕ್ರವಾರ ಮಧ್ಯಾಹ್ನ ಎಲ್ಲಾ ಆರೋಪಿಗಳಿಗೆ ಮೊಸರನ್ನ ನೀಡಲಾಗಿತ್ತು. ಎರಡು ತುತ್ತು ಸೇವಿಸಿದ ಪವಿತ್ರಾ ತಾನು ಪೊಲೀಸ್‌ ಕಸ್ಟಡಿಯಲ್ಲಿ ನಾನು ಇದ್ದೇನೆ ಎನ್ನುವುದನ್ನೇ ಮರೆತು ಇದು ಇಷ್ಟೊಂದು ಹುಳಿ ಇದೆ ಹೇಗೆ ತಿನ್ನೋದು ಎಂದು ಅಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ರೀಲ್ ಗಜನ ಪಳಗಿಸಿದ ರಿಯಲ್ ಸಲಗ | ಆಪರೇಷನ್‌ ’36’ ಸೂಪರ್ ಕಾಪ್ಸ್ – ಸೂಪರ್ ಸ್ಟೋರಿ ಓದಿ

ಪವಿತ್ರಾ ಪ್ರಶ್ನೆಗೆ, ನಾನು ಊಟ ಮಾಡ್ತಿರೋದು ಕೂಡ ಅದೇ ಮೊಸರನ್ನ. ಬೇಕಾದ್ರೆ ಊಟ ಮಾಡು. ಇಷ್ಟ ಇಲ್ಲದೇ ಇದ್ರೆ ಬಿಟ್ಟು ಬಿಡು ಎಂದು ಅಷ್ಟೇ ಖಡಕ್‌ ಆಗಿ ಉತ್ತರ ನೀಡಿದ್ದಾರೆ. ಈ ಉತ್ತರಕ್ಕೆ ಪೆಚ್ಚಾದ ಪವಿತ್ರಾ ಗೌಡ ಕೊನೆಗೆ ಮೊಸರನ್ನ ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್‌ ಎ2 ಆರೋಪಿಯಾಗಿದ್ದಾರೆ.