231 ಸಾಕ್ಷಿ ಕೇಳಿ ಜೈಲಿನಲ್ಲಿ ದರ್ಶನ್‌ ಶಾಕ್‌!

ಬೆಂಗಳೂರು/ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renuka Swamy Murder Case) ಚಾರ್ಜ್‌ಶೀಟ್‌ (Chargesheet) ಸಲ್ಲಿಕೆ ಮಾಡಿದ ವಿಚಾರ ತಿಳಿದು ಬಳ್ಳಾರಿ ಜೈಲಿನಲ್ಲಿ (Ballari Jail) ದರ್ಶನ್ ಚಡಪಡಿಸಿದ್ದಾರೆ. ಚಾರ್ಜ್‌ಶೀಟ್‌ ಸಲ್ಲಿಕೆ ಆಗುವ ವಿಚಾರ ತಿಳಿದು ನಿನ್ನೆ ರಾತ್ರಿಯಿಂದ ದರ್ಶನ್ (Darshan) ಊಟ ನಿದ್ದೆ ಬಿಟ್ಟಿದ್ದರು.

ಇಂದು ಆರೋಪ ಪಟ್ಟಿ ಸಲ್ಲಿಕೆ ನಂತರ ಅದರಲ್ಲಿ ಏನಿದೆ ಎನ್ನುವುದನ್ನು ತಿಳಿಯಲು, ತಮ್ಮ ಸೆಲ್ ಬಳಿ ಬಂದ ಸಿಬ್ಬಂದಿಯನ್ನು ದರ್ಶನ್ ಪದೇ ಪದೇ ಮಾತನಾಡಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.  ಇದನ್ನೂ ಓದಿ: ಹತ್ಯೆಯಾಗುವ ಮುನ್ನ ಎರಡು ಲಾರಿ ಮಧ್ಯೆ ಕುಳಿತು ಅಂಗಲಾಚಿದ್ದ ರೇಣುಕಾಸ್ವಾಮಿ

 
ಆರೋಪಪಟ್ಟಿಯಲ್ಲಿ ಏನೆಲ್ಲಾ ಅಂಶಗಳಿವೆ ಎಂಬುದನ್ನು ಪದೇ ಪದೇ ಕೇಳಿ ತಿಳಿದುಕೊಂಡಿದ್ದಾರೆ. 231 ಸಾಕ್ಷಿಗಳ ಸಂಖ್ಯೆ ಕೇಳಿ ಶಾಕ್ ಆಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಿಮ್ಮನ್ನು ತಾಯಿಯಾಗಿ ಪಡೆದಿರುವುದು ನನ್ನ ಪುಣ್ಯ- ಜೈಲಿನಲ್ಲಿರುವ ಪವಿತ್ರಾರನ್ನು ನೆನೆದು ಮಗಳು ಭಾವುಕ ಪೋಸ್ಟ್

ಪ್ರಿಸನ್ ಕಾಲ್ ಸಿಸ್ಟಂ ಬಳಸಿಕೊಂಡು ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ. ಮುಂದೇನು ಮಾಡಬೇಕು? ಜಾಮೀನಿಗೆ ಯಾವಾಗ ಅರ್ಜಿ ಸಲ್ಲಿಸಬೇಕು? ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಗೌಡ ಸಹ ಫುಲ್ ಟೆನ್ಶನ್‌ನಲ್ಲಿದ್ದರು. ಚಾರ್ಜ್‌ಶೀಟ್‌ ವಿಚಾರ ಕೇಳಿ ಪವಿತ್ರಾಗೌಡ ಜಾಮೀನು ಆಸೆ ಕಮರಿದೆ ಎನ್ನಲಾಗಿದೆ.