ವಿದೇಶಕ್ಕೆ ಶೂಟಿಂಗ್‌ ತೆರಳಲು ಅನುಮತಿ ಕೋರಿ ದರ್ಶನ್‌ ಅರ್ಜಿ

ಬೆಂಗಳೂರು: ಡೆವಿಲ್ (Devil) ಸಿನಿಮಾ ಶೂಟಿಂಗಾಗಿ ದುಬೈ (Dubai)  ಮತ್ತು ಯೂರೋಪ್‌ಗೆ (Europe) ತೆರಳಲು ಅನುಮತಿ ಕೋರಿ ದರ್ಶನ್ (Darshan) ಅರ್ಜಿ ಸಲ್ಲಿಸಿದ್ದಾರೆ.

ಜೂನ್ 1 ರಿಂದ 25 ರವರೆಗೆ 25 ದಿನಗಳ ಕಾಲ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಸಿಆರ್‌ಪಿಸಿ ಸೆಕ್ಷನ್ 439(1) (b) ಅಡಿ 57 ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಇದನ್ನೂ ಓದಿ: ತಮಿಳಿನಿಂದ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರ ಆಕ್ರೋಶ

 

ವಿದೇಶಕ್ಕೆ ತೆರಳಿದರೆ ಭಾರತಕ್ಕೆ ಮತ್ತೆ ವಾಪಸ್‌ ಬರುವುದು ಅನುಮಾನ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಡೆಯುತ್ತಿರುವುದ್ದರಿಂದ ವಿದೇಶಕ್ಕೆ ತೆರಳಲು ಅನಮತಿ ನೀಡದಂತೆ ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಆಕ್ಷೇಪಣೆ ಸಲ್ಲಿಸಿದ್ದಾರೆ.

ದರ್ಶನ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಕೋರ್ಟ್‌ನಲ್ಲಿ ನಡೆಯಲಿದೆ. ಇದನ್ನೂ ಓದಿ: ಕಾರಿನ ಸನ್‌ರೂಫ್ ತೆಗೆದು ದಂಪತಿಯಿಂದ ಹುಚ್ಚಾಟ – ದಂಡ ವಿಧಿಸಿ, ಎಚ್ಚರಿಸಿದ ಪೊಲೀಸರು