ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡ ಅಸ್ವಸ್ಥ

ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸರ ಕಸ್ಟಡಿಯಲ್ಲಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಗೆಳತಿ ಪವಿತ್ರಾ ಗೌಡ ಅಸ್ವಸ್ಥಗೊಂಡಿದ್ದಾರೆ.

ಪವಿತ್ರಾ ಗೌಡ ಅಸ್ವಸ್ಥರಾದ ಹಿನ್ನೆಲೆ ಇಂದು ಮಧ್ಯಾಹ್ನ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವೈದ್ಯರನ್ನು ಕರೆಸಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಪವಿತ್ರಾ ಗೌಡ ಅವರನ್ನು ವೈದ್ಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕಿಡ್ನಾಪ್‌ & ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ (Pavithra Gowda) ಎ1 ಆರೋಪಿಯಾಗಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆಯ ಹಿನ್ನೆಲೆಯಲ್ಲಿ ಸದ್ಯ ಇವರು ಪೊಲೀಸ್‌ ಕಸ್ಟಡಿಯಲ್ಲಿದೆ. ಇದನ್ನೂ ಓದಿ: ದರ್ಶನ್ ಕುಳಿತರೆ ಜುಟ್ಟು, ನಿಂತರೆ ಕಾಲು- ಗುಮ್ಮಿದ ಉಮಾಪತಿ

ಪೊಲೀಸ್ ಕಸ್ಟಡಿ ವೇಳೆ ಸರಿಯಾಗಿ ಊಟ, ತಿಂಡಿ ಸೇವಿಸದೆ ಇರುವುದರಿಂದ ಪವಿತ್ರಾ ಗೌಡ ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ಇಂದು ಮಧ್ಯಾಹ್ನ ಕೂಡ ಅವರು ಊಟ ಮಾಡಿರಲಿಲ್ಲ. ಹೀಗಾಗಿ ಸತತ ವಿಚಾರಣೆ ವೇಳೆ ಅಸ್ವಸ್ಥಳಾಗಿ ಕುಸಿದುಬಿದ್ದಿದ್ದಾರೆ. ಕೂಡಲೇ ಪೊಲೀಸರು ಠಾಣೆಗೆ ವೈದ್ಯರನ್ನು ಕರೆಸಿದ್ದಾರೆ. ವೈದ್ಯರು ಬಂದು ಚೆಕ್‌ ಮಾಡಿದಾಗ ಸರಿಯಾಗಿ ಊಟ ಸೇವಿಸದೆ ಅಸ್ವಸ್ಥರಾಗಿರೋದು ಬಯಲಾಗಿದೆ.


ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್‌ & ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ ಮಾಡಿರುವುದಾಗಿ ಪವಿತ್ರಾ ಗೌಡ ಅವರು ಆರೋಪಿ ಪವನ್‌ಗೆ ತಿಳಿಸಿದ್ದಾರೆ. ಅಲ್ಲದೇ ಈ ವಿಚಾರವನ್ನು ದರ್ಶನ್‌ ಬಳಿ ಹೇಳದಂತೆ ತಾಕೀತು ಮಾಡಿದ್ದಾರೆ. ಆದರೆ ಪವನ್‌ ಮೆಸೇಜ್‌ ವಿಚಾರವನ್ನು ದರ್ಶನ್‌ಗೆ ತಿಳಿಸಿದ್ದಾರೆ.

ಪರಿಣಾಮ ದರ್ಶನ್‌ ತನ್ನ ಪಟಾಲಂ ಜೊತೆ ಸೇರಿಕೊಂಡು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್‌ ಮಾಡಿ ಬೆಂಗಳೂರಿಗೆ ಕರೆತಂದಿದ್ದಾರೆ. ನಂತರ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ.