ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ: ರೇಣುಕಾಚಾರ್ಯ ವ್ಯಂಗ್ಯ

ಬೆಂಗಳೂರು: ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ

ದಿಂಗಾಲೇಶ್ವರ ಶ್ರೀಗಳ 40% ಕಮಿಷನ್ ಆರೋಪಕ್ಕೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಠಾಧೀಶರ ಬಗ್ಗೆ ಅಪಾರ ಗೌರವ ಇದೆ. ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ. ಕಾಂಗ್ರೆಸ್ ಏಜೆಂಟ್ ಅಂತಾ ಹೇಳಿಕೆ ಕೊಟ್ಟಿದ್ದಾರೆ. ಖಾವಿ ಹಾಕಿದ ಮೇಲೆ ಧರ್ಮದ ಬೋಧನೆ ಮಾಡಬೇಕು. ಮಾನವ ಧರ್ಮಕ್ಕೆ ಜಯವಾಗಬೇಕು ಎನ್ನಬೇಕು ಎಂದು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ – ಮಸೀದಿ ಮೇಲೆ `ಜೈಶ್ರೀರಾಮ್’ ಲೇಸರ್ ಲೈಟ್ ಹಾಕಿದ್ದ ಹಾಕಿದ್ದ ಕಿಡಿಗೇಡಿಗಳು

ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಯನ್ನ ಅನೇಕ ಸ್ವಾಮೀಜಿಗಳು ಖಂಡಿಸಿದ್ದಾರೆ. ಇಂತಹ ವಿಚಾರ ಇದ್ದರೆ ಸಿಎಂ ಜೊತೆ ಚರ್ಚೆ ಮಾಡಬೇಕಿತ್ತು. ಹೀಗೆ ಮಾತನಾಡುವವರು ಕಾಂಗ್ರೆಸ್ ಪಾರ್ಟಿ ಸೇರಿಕೊಳ್ಳಿ. ಕೆಲವು ಗುತ್ತಿಗೆದಾರರು ಕಾಂಗ್ರೆಸ್ ಹೇಳಿದಂತೆ ಕೇಳುತ್ತಾ ಇದ್ದಾರೆ. 40 ಪಸೆರ್ಂಟ್ ಅಂತ ಡ್ರಾಫ್ಟ್ ಹಾಕಿಸಿದ್ದಾರೆ ಎಂದರು.

ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಾಗುತ್ತಿದೆ. ಭ್ರಷ್ಟಾಚಾರ ಹುಟ್ಟಿದ್ದೇ ಕಾಂಗ್ರೆಸ್ ಅವರಿಂದ. 40% ದಾಖಲೆ ಇದ್ದರೆ ಕೆಂಪಣ್ಣ ಬಿಡುಗಡೆ ಮಾಡಲಿ. ಹಾವು ಬಿಡ್ತೀವಿ ಹಾವು ಬಿಡ್ತೀವಿ ಅಂದ್ರೆ ಹೇಗೆ? ನಮ್ಮ ಸರ್ಕಾರಕ್ಕೆ ಯಾರನ್ನು ಕೇಳಿ ತನಿಖೆ ಮಾಡಬೇಕು ಅನ್ನೋದು ಗೊತ್ತು. ಲೋಕಸಭೆಯಲ್ಲಿ ನಿಮಗೆ ಅಡ್ರೆಸ್ ಇದೇಯಾ ನಿಮಗೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ನಮ್ಮ ಕ್ಷೇತ್ರದ ವಿಚಾರವಾಗಿ ದೆಹಲಿಗೆ ಹೋಗಿದ್ದೆ. ನಾನು ಸಚಿವ ಆಕಾಂಕ್ಷಿಯಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾನು ಬದ್ದ ಎಂದು ಸಚಿವ ಸ್ಥಾನ ಬೇಡ ಎಂದರು.

ಈಶ್ವರಪ್ಪ ಮೇಲೆ ಆರೋಪ ವಿಚಾರವಾಗಿ ಮಾತನಾಡಿ, ಮಾಜಿ ಅಧ್ಯಕ್ಷ ಲೇಟರ್ ಕೊಟ್ಟರೆ, ಈಶ್ವರಪ್ಪ ಅವರಿಗೂ ಅದಕ್ಕೂ ಏನೂ ಸಂಬಂಧ? ಟೆಂಡರ್ ಆಗಬೇಕು, ವರ್ಕ್ ಆರ್ಡರ್ ಬರಬೇಕು. ಸುಮ್ಮನೆ 4 ಕೋಟಿ ಬಿಡುಗಡೆ ಮಾಡಲು ಆಗುತ್ತಾ? ಕೆಲಸ ಆಗದೆ ಹಣ ಬಿಡುಗಡೆ ಮಾಡಲು ಆಗುತ್ತಾ? ನಮ್ಮ ಸರ್ಕಾರದಿಂದ ಪಾರದರ್ಶಕವಾಗಿ ತನಿಖೆಯಾಗುತ್ತಿದೆ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಅವರಿಗೆ ಶಿಕ್ಷೆಯಾಗುತ್ತೆ ಎಂದರು.

ಮಹಾ ನಾಯಕರ ಹೆಸರು ಅತೀ ಶೀಘ್ರದಲ್ಲೇ ಬರುತ್ತೆ. ಅತೀ ಶೀಘ್ರದಲ್ಲೇ ತನಿಖೆಯಿಂದ ಕಾಂಗ್ರೆಸ್‍ನ ಮಹಾ ನಾಯಕರ ಹೆಸರು ಹೊರ ಬರುತ್ತೆ ಎಂದರು.

Comments

Leave a Reply

Your email address will not be published. Required fields are marked *