ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಎಸ್‍ಎಂ ಕೃಷ್ಣ ಅವರ ಫೋಟೋವನ್ನ ಕಾಂಗ್ರೆಸ್‍ನ ಕಾರ್ಯಕರ್ತರು ತೆಗೆದ ಕಾರಣ ಹಾಲಿ ಅಧ್ಯಕ್ಷ ಪರಮೇಶ್ವರ್ ಒಂದು ಕ್ಷಣ ಕೋಪಗೊಂಡ ಘಟನೆ ನಡೆಯಿತು.
ಪಕ್ಷದ ಕಚೇರಿಯ ಅಧ್ಯಕ್ಷರ ಸಾಲಿನಲ್ಲಿದ್ದ ಕೃಷ್ಣ ಅವರ ಫೋಟೋವನ್ನು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳಾದ ರಫಿಉಲ್ಲಾ ಮತ್ತು ಸರ್ದಾರ್ ಸೆರ್ಧಾರ್ ಷರೀಫ್ ಎಂಬವರು ತೆಗೆದಿದ್ದರು. ಇದರಿಂದ ಕೋಪಗೊಂಡ ಪರಮೇಶ್ವರ್ ತಕ್ಷಣವೇ ಎಸ್‍ಎಂಕೆ ಫೋಟೋ ಹಾಕಿಸಿ, ಅವರಿಬ್ಬರನ್ನ ಉಚ್ಛಾಟಿಸಿ ಆದೇಶ ಹೊರಡಿಸಿದ್ದಾರೆ.
ಕೃಷ್ಣ ಅವರು ಪಕ್ಷ ಬಿಟ್ಟು ಹೋಗಿರಬಹುದು. ಆದರೆ ಅವರ ಮೇಲೆ ನಮಗೆ ಗೌರವವಿದೆ ಅಂತ ಪರಮೇಶ್ವರ್ ಹೇಳಿದ್ದಾರೆ.
https://www.youtube.com/watch?v=IfRFx5wQj5Q



Leave a Reply