ಚೀರಾಡುತ್ತಿದ್ದರೂ ಒಬ್ಬ ವೈದ್ಯ ಬರಲಿಲ್ಲ – ಆಸ್ಪತ್ರೆ ಗೇಟ್‌ ಬಳಿ ತರಕಾರಿ ಗಾಡಿಯಲ್ಲೇ ಮಗುವಿಗೆ ಜನ್ಮವಿತ್ತ ಮಹಿಳೆ

– ವೈದ್ಯರ ಅಮಾನವೀಯ ನಡೆಗೆ ಸಾರ್ವಜನಿಕರಿಂದ ಖಂಡನೆ

ಚಂಡೀಗಢ: ಹರಿಯಾಣದ ಅಂಬಾಲಾದ ಸರ್ಕಾರಿ ಆಸ್ಪತ್ರೆ (Haryana Hospital) ಆವರಣದಲ್ಲಿ ಮಹಿಳೆಯೊಬ್ಬರು ತರಕಾರಿ ತಳ್ಳುಗಾಡಿಯಲ್ಲೇ ಮಗುವಿಗೆ ಜನ್ಮವಿತ್ತ ಘಟನೆ ನಡೆದಿದೆ.

ಚಳಿಯ ವಾತಾವರಣದಲ್ಲಿ ಮಹಿಳೆ (Woman) ಹಾಗೂ ಕುಟುಂಬಸ್ಥರು ಬೇಡಿಕೊಳ್ಳುತ್ತಿದ್ದರೂ ಯಾವೊಬ್ಬ ವೈದ್ಯರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಮಹಿಳೆ ಆಸ್ಪತ್ರೆ ಆವರಣದಲ್ಲಿ ಇರಿಸಲಾಗಿದ್ದ ತರಕಾರಿ ತಳ್ಳುಗಾಡಿಯಲ್ಲೇ (Vegetable Cart) ಮಗುವಿಗೆ ಜನ್ಮ ನೀಡಿದ್ದಾರೆ. ಅದಾದ ಕೆಲ ಸಮಯದ ನಂತರ ಆಕೆಯೆನ್ನ ಆಸ್ಪತ್ರೆಯೊಳಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

ಸಂತ್ರಸ್ತ ಮಹಿಳೆ ಪಂಜಾಬ್‌ನ ಮೊಹಾಲಿ ಜಿಲ್ಲೆಯ ದಪ್ಪರ್‌ನ ನಿವಾಸಿಯಾಗಿದ್ದಾರೆ. ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪತಿ ಆಕೆಯನ್ನ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ ಅಂಗಲಾಚಿ ಬೇಡಿಕೊಂಡರೂ ಯಾವೊಬ್ಬ ವೈದ್ಯರೂ ಸಹಾಯಕ್ಕೆ ಬರಲಿಲ್ಲ. ಆಕೆಗೆ ಸ್ಟ್ರೆಚರ್‌ ಕೊಡುವುದಕ್ಕೂ ಸಿದ್ಧರಿರಲಿಲ್ಲ. ಕೊನೆಗೆ ಆಸ್ಪತ್ರೆ ಗೇಟ್‌ ಬಳಿಯೇ ತಳ್ಳುಗಾಡಿಯಲ್ಲಿ ಮಗುವಿಗೆ ಜನ್ಮವಿತ್ತಿದ್ದಾಳೆ. ಇದನ್ನೂ ಓದಿ: ಪತಿಗೆ ಮಗು ತೋರಿಸಲು ಇಷ್ಟವಿಲ್ಲದಿದ್ದರಿಂದ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ: ತಪ್ಪೊಪ್ಪಿಕೊಂಡ ಸೇಠ್

ನಂತರ ವೈದ್ಯರು ಪ್ರಾಣಾಪಾಯವಾಗಬಹುದು ಎಂದು ಹೆದರಿ, ತಾಯಿ ಮತ್ತು ಮಗುವನ್ನು ಆಸ್ಪತ್ರೆಯೊಳಕ್ಕೆ ಕರೆದೊಯ್ದು ವಾರ್ಡ್‌ನಲ್ಲಿ ದಾಖಲಿಸಿದ್ದಾರೆ. ನಂತರ ಈ ಬಗ್ಗೆ ಮಾತನಾಡಿದ ಮಹಿಳೆಯ ಪತಿ, ಆ ದೇವರೇ ನನ್ನ ಪತ್ನಿ ಮತ್ತು ಮಗುವನ್ನು ರಕ್ಷಿಸಿದ್ದಾನೆ. ನಾನು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ದೇವರೆಂದು ಭಾವಿಸಿದ್ದೆ, ಆದ್ರೆ ಇಲ್ಲಿನ ಘಟನೆ ನೋಡಿ ವೈದ್ಯರ ಮೇಲಿನ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಇನ್ನೂ ಘಟನೆಯನ್ನು ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್ ಅವರ ಗಮನಕ್ಕೆ ತರಲಾಗಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ 2.50 ಲಕ್ಷ ರೂ. ಕಳ್ಳತನ!