ಫೋಟೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ – ಪ್ರಿಯತಮನ ವಿರುದ್ಧ ರೀಲ್ಸ್ ರಾಣಿ ಕಿಪ್ಪಿ ಕೀರ್ತಿ ದೂರು

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್‌ನಿಂದ ಜನಪ್ರಿಯಳಾಗಿರುವ ಕಿಪ್ಪಿ ಕೀರ್ತಿ (Kipi Keerthi) ತನ್ನ ಪ್ರಿಯತಮನ ವಿರುದ್ಧ ದೂರು ದಾಖಲಿಸಿದ್ದಾಳೆ.

ಈ ಕುರಿತು ಬ್ಯಾಡರಹಳ್ಳಿ (Byadarahalli) ಪೊಲೀಸ್ ಠಾಣೆಯಲ್ಲಿ ಪ್ರಿಯತಮ ಮುತ್ತು ಹಾಗೂ ಆತನ ಸ್ನೇಹಿತ ದಚ್ಚು ಎಂಬಾತನ ವಿರುದ್ಧ ದೂರು ದಾಖಲಿಸಿದ್ದು, ನನ್ನ ಖಾಸಗಿ ಫೋಟೋಗಳನ್ನು ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.ಇದನ್ನೂ ಓದಿ: IAF ಗ್ರೂಪ್ ಕ್ಯಾಪ್ಟನ್ ಕಳಿಸಿದ ಮೇಲ್‌ನಿಂದ ಚೈತನ್ಯಾನಂದನ ಕಾಮಪುರಾಣ ಬಯಲಾಯ್ತು!

ದೂರಿನ ಆಧಾರದ ಮೇಲೆ ಆರೋಪಿಗಳ ವಿಚಾರಣೆ ನಡೆಸಿದಾಗ ಕಿಪ್ಪಿ ಕೀರ್ತಿ ಅವರಿಬ್ಬರ ಲಿಂಗದ ಬಗ್ಗೆ ಮಾತನಾಡಿದ್ದಳಂತೆ. ನೀವಿಬ್ಬರು ಗೇ ಎಂದು ಹೇಳಿದ್ದಳಂತೆ. ಹೀಗಾಗಿ ಇಬ್ಬರು ಆಕೆಯ ಫೋಟೋ, ವಿಡಿಯೋಗಳನ್ನು ಇಟ್ಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಕಿಪ್ಪಿ ಕೀರ್ತಿ ಹಾಗೂ ಸ್ನೇಹಿತರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೆ ಈ ರೀತಿ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.ಇದನ್ನೂ ಓದಿ: ಮತ್ತೆ ಬೆನ್ನು ನೋವಿನ ಕಥೆ ಹೇಳಿದ ದರ್ಶನ್‌ – ಮಹತ್ವ ಕೊಡದ ಜಡ್ಜ್‌