ದೆಹಲಿಯಲ್ಲಿ ಕೊರೊನಾ ಆರ್ಭಟ – GRPA ಆ್ಯಕ್ಷನ್ ಪ್ಲಾನ್‌ನಂತೆ ರೆಡ್‌ಅಲರ್ಟ್ ಘೋಷಣೆ

DHELI COVID

ನವದೆಹಲಿ: ಕೊರೊನಾ 4ನೇ ಅಲೆ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಆರಂಭವಾಗಿದೆ. ದೆಹಲಿಯಲ್ಲಿ ಪ್ರತಿದಿನ 1 ಸಾವಿರಕ್ಕಿಂತಲೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಪಾಸಿಟಿವಿಟಿ ದರ ಶೇ.7.64ಕ್ಕೆ ಏರಿಕೆಯಾಗಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ರೆಡ್‌ಅಲರ್ಟ್ ಘೋಷಿಸಿರುವ ದೆಹಲಿ ಸರ್ಕಾರ ರಾತ್ರಿ ಹಾಗೂ ವಾರಂತ್ಯ ಕರ್ಫ್ಯೂ ಅನ್ನು ಮುಂದುವರಿಸಿದೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಗೊಳಿಸಿದೆ. ಇದನ್ನೂ ಓದಿ: ಇಲ್ಲಿ 1 ಮಾವಿನ ಹಣ್ಣಿಗೆ 2 ಸಾವಿರ – ತಿಂಗಳಿಗೆ ಮುಂಚೆಯೇ ಶುರುವಾಗಿದೆ ಬುಕ್ಕಿಂಗ್ 

COVID HIKE 2

ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ 1354 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇ.7.64ಕ್ಕೆ ಏರಿಕೆಯಾಗಿರುವುದರಿಂದ, ರಾಜ್ಯ ಸರ್ಕಾರವು ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (GRAP- ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್) ಅನ್ನು ರೂಪಿಸಿ, ರೆಡ್ ಅಲರ್ಟ್ ಘೋಷಿಸಿದೆ. ಯಾವುದೇ ರಾಜ್ಯದಲ್ಲಿ ಸೋಂಕು ಶೇ.5ಕ್ಕಿಂತ ಹೆಚ್ಚು ವ್ಯಾಪಿಸಿದಾಗ ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದು. ಜಿಆರ್‌ಎಪಿ ಅನ್ವಯ ಹಲವು ನಿರ್ಬಂಧಗಳನ್ನು ವಿಧಿಸಿದೆ. ಇದನ್ನೂ ಓದಿ: ನೀವು ಮಮತಾ ಬ್ಯಾನರ್ಜಿ ಏಜೆಂಟ್‌, ಇಲ್ಲಿಂದ ತೊಲಗಿ: ಚಿದಂಬರಂ ವಿರುದ್ಧ ಕಾಂಗ್ರೆಸ್‌ ಮುಖಂಡರು, ವಕೀಲರ ಆಕ್ರೋಶ

china-coronavirus covid

ಜಿಆರ್‌ಎಪಿ ನಿರ್ಬಂಧಗಳೇನು?

  • ಸತತ 2 ದಿನಗಳ ವರೆಗೆ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾದರೆ, ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಆರ್‌ಎಪಿ ಅಡಿಯಲ್ಲಿ ರೆಡ್‌ಅಲರ್ಟ್ ಘೋಷಿಸಿ, ಕರ್ಫ್ಯೂ ವಿಧಿಸಬಹುದು. ಇದರಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ.
  • ಈ ಕರ್ಫ್ಯೂ ರಾತ್ರಿ ವೇಳೆ ಹಾಗೂ ವಾರಾಂತ್ಯದಲ್ಲಿ ಜನ ಸಂಚಾರ ನಿಯಂತ್ರಿಸುವ ಅಂಶ ಒಳಗೊಂಡಿರುತ್ತದೆ.
  • ಅಗತ್ಯವಲ್ಲದ ಸರಕು – ಸೇವೆಗಳ ಅಂಗಡಿಗಳು ಮತ್ತು ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಮಾಲ್ ಹಾಗೂ ವಾರದ ಸಂತೆಗಳು ನಿಷೇಧಿಸಲ್ಪಡುತ್ತವೆ.
  • ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನಿರ್ಬಂಧ. ಅಗತ್ಯ ವಸ್ತುಗಳ ಡೆಲಿವರಿಗೆ ಅವಕಾಶ.
  • ಹೋಟೆಲ್ ಮತ್ತು ಲಾಡ್ಜ್ಗಳಿಗೆ ಅವಕಾಶ. ರೂಂ ಸರ್ವೀಸ್ ಹಾಗೂ ಅತಿಥಿಗಳು ತಂಗಲು ಅವಕಾಶವಿರಲಿದೆ. ಆದರೆ, ಷರತ್ತುಗಳು ಅನ್ವಯವಾಗಲಿದೆ.
  • ಸಿನೆಮಾ ಥಿಯೇಟರ್‌ಗಳು, ಔತಣಕೂಟಗಳು, ಸ್ಪಾ, ಯೋಗ ಸಂಸ್ಥೆಗಳು ಹಾಗೂ ಬ್ಯೂಟಿಪಾರ್ಲರ್, ಸಲೂನ್‌ಗಳು ನಿಷೇಧ. ವಿವಾಹ ಸಮಾರಂಭಗಳಿಗೆ ನಿಯಮಿತ ಜನಸಂಖ್ಯೆ.
  • ಅತ್ಯಗತ್ಯ ಕೆಲಸಗಳನ್ನು ಹೊರತುಪಡಿಸಿ, ಸರ್ಕಾರಿ ಕಚೇರಿಗಳ ಕಾರ್ಯವನ್ನೂ ಸ್ಥಗಿತಗೊಳಿಸಬಹುದು.
  • ಜಿಆರ್‌ಎಪಿ ಜಾರಿಯಲ್ಲಿರುವಾಗ ಜನರು ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಒಳಗೊಂಡಿರಬೇಕು. ಕಳೆದ 72 ಗಂಟೆಗಳಲ್ಲಿ ಆರ್‌ಟಿಪಿಆರ್ ಪರೀಕ್ಷಿಸಿದ ನೆಗೆಟಿವ್ ವರದಿ ಇರಬೇಕು. ಇಲ್ಲದಿದ್ದಲ್ಲಿ 14 ದಿನಗಳ ವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

Comments

Leave a Reply

Your email address will not be published. Required fields are marked *