ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್, ಟ್ವಿಟ್ಟರ್‌ಗಳಲ್ಲಿ ಮೀಮ್ಸ್‌ಗಳು (Memes) ಹರಿದಾಡುತ್ತಿವೆ. ಇದು ಈಗಿನ ಟ್ರೆಂಡ್ (Trend) ಕೂಡಾ ಆಗಿದೆ. ಯಾವುದಾದರೂ ಒಂದು ಫೋಟೋದ ಮೇಲೆ ವ್ಯಂಗ್ಯವಾದ ಸಾಲುಗಳನ್ನು ಬರೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಕ್ಕೆ ಮೀಮ್ಸ್ ಎಂದು ಕರೆಯುತ್ತಾರೆ. ಇದರಲ್ಲಿ ಆಸಕ್ತಿ ಇರುವವರಿಗೆ ಇದೀಗ ಉತ್ತಮ ಆಫರ್ ಒಂದು ಒದಗಿ ಬಂದಿದೆ.
ಬೆಂಗಳೂರಿನಲ್ಲಿರುವ (Bengaluru) ‘ಸ್ಟಾಕ್ ಗ್ರೋ’ (StockGro) ಎಂಬ ಸ್ಟಾರ್ಟಪ್ ಕಂಪನಿಯಲ್ಲಿ ಚೀಫ್ ಮೀಮ್ಸ್ ಆಫೀಸರ್ (CMO) ಹುದ್ದೆಗೆ ನೇಮಕಾತಿ ಆರಂಭಗೊಂಡಿದೆ. ಅಲ್ಲದೇ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಒಂದು ಲಕ್ಷ ರೂ. ಸಂಬಳ ನೀಡುವುದಾಗಿ ಕಂಪನಿ ತಿಳಿಸಿದೆ. ಸ್ಟಾಕ್ ಗ್ರೋ ಕಂಪನಿಯು ದೇಶದ ಮೊದಲ ಸೋಶಿಯಲ್ ಟ್ರೇಡಿಂಗ್ ಪ್ಲಾಟ್‌ಫಾರಂ ಎಂದು ತನ್ನನ್ನು ತಾನು ಬಿಂಬಿಸಿಕೊಂಡಿದೆ. ಇದನ್ನೂ ಓದಿ: ಮದ್ಯಪಾನ ಮಾಡಿ ಒಂದೇ ವಾರದಲ್ಲಿ ಐವರ ಸಾವು – ಗ್ರಾಮಸ್ಥರಲ್ಲಿ ಮೂಡಿದ ಆತಂಕ
ಚೀಫ್ ಮೀಮ್ಸ್ ಆಫೀಸರ್ ಹುದ್ದೆಯು ಫುಲ್‌ಟೈಮ್ (Full Time) ಹುದ್ದೆಯಾಗಿದೆ. ಅಭ್ಯರ್ಥಿಗಳು ಷೇರು ಮಾರುಕಟ್ಟೆಯ (Stock Market) ಸಂಪೂರ್ಣ ಜ್ಞಾನ ಹಾಗೂ ಅದರ ಸುತ್ತ ಮೀಮ್ಸ್‌ಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಅಲ್ಲದೇ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳ ಬಗೆಗಿನ ಅರಿವು, ಹಾಸ್ಯ ಪ್ರಜ್ಞೆ ಮತ್ತು ಉತ್ತಮ ಸಂವಹನವನ್ನು ಹೊಂದಿರಬೇಕು. ಇದನ್ನೂ ಓದಿ: ಕೇಂದ್ರ ಗೃಹ ಇಲಾಖೆಯೊಂದಿಗಿನ ಸಂಘರ್ಷದ ಬಳಿಕ ದೆಹಲಿ ಬಜೆಟ್ ಮಂಡಿಸಿದ ಆಮ್ ಆದ್ಮಿ
ಕಳೆದ 8 ದಿನಗಳಿಂದ ಈ ನೇಮಕಾತಿಯು ಆರಂಭಗೊಂಡಿದ್ದು ಅರ್ಹ ಅಭ್ಯರ್ಥಿಗಳು ಲಿಂಕ್ಡಿನ್ (Linkdin) ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇದನ್ನೂ ಓದಿ: ‘ಶ್ರೀಮಂತ’ ಟ್ರೈಲರ್ ಬಿಡುಗಡೆ : ಇದು ಸೋನು ಸೂದ್ ಸಿನಿಮಾ


Leave a Reply