ಬೆಂಗಳೂರು: ರೋಗಿಗಳನ್ನು ಆಸ್ಪತ್ರೆ ಹೇಗೆ ನಿರ್ಲಕ್ಷ್ಯದಿಂದ ನೋಡುತ್ತದೆ ಎನ್ನುವುದನ್ನು ತಿಳಿಸುವುದಕ್ಕಾಗಿ ಈ ವಿಡಿಯೋವನ್ನು ನಾನು ಸೆರೆ ಹಿಡಿದಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶ ಇದರಲ್ಲಿ ಇಲ್ಲ ಎಂದು ಮುರಳಿ ನಾಯಕ್ ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು ಈ ಘಟನೆ ಹೇಗಾಯ್ತು ಎನ್ನುವುದನ್ನು ವಿವರಿಸಿದ್ದು ಹೀಗೆ
ಮೇ 31 ರಂದು ಮಧ್ಯಾಹ್ನ ನಾನು ನಮ್ಮ ಸಂಬಂಧಿಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದೆ. ಈ ವೇಳೆ ಮಹಿಳೆಯೊಬ್ಬರು ಧರಧರನೇ ವ್ಯಕ್ತಿಯೊಬ್ಬರನ್ನು ಎಳೆದುಕೊಂಡು ಬರುವುದನ್ನು ನಾನು ನೋಡಿದೆ.
ಇದನ್ನು ನೋಡಿ ನಾನು ಶಾಕ್ ಆದೆ. ನಾನು ನೋಡುವವರೆಗೆ ಆಗಲೇ ಅವರು ಬಹಳ ದೂರದವರೆಗೆ ಎಳೆದುಕೊಂಡು ಬಂದಿದ್ದರು. ಈ ದೃಶ್ಯವನ್ನು ನಾನು ನೋಡಿದ ಕೂಡಲೇ ಅವರ ಬಳಿ ಹೋಗಿ ಯಾಕೆ ಈ ರೀತಿ ಎಳೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಇದಕ್ಕೆ ಅವರು, ಪತಿಗೆ ಎಕ್ಸ್ ರೇ ಮಾಡಿಸಬೇಕು. ಡಾಕ್ಟರ್ ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಆದರೆ ಪತಿಯನ್ನು ಕರೆದುಕೊಂಡು ಹೋಗಲು ವೀಲ್ ಚೇರ್ ಕೊಡಿ ಎಂದು ಕೇಳಿದ್ದಕ್ಕೆ ಯಾರು ಕೊಟ್ಟಿಲ್ಲ. ಸಾಕಷ್ಟು ಬಾರಿ ಕೇಳಿದರೂ ವೀಲ್ ಚೇರ್ ಇಲ್ಲ ಎಂದೇ ಹೇಳಿದರು. ಹೀಗಾಗಿ ಅನಿವಾರ್ಯವಾಗಿ ಎಳೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದರು.
ಈ ಮಾತನ್ನು ಕೇಳಿ ನನಗೆ ಶಾಕ್ ಆಯ್ತು. ಈ ಆಸ್ಪತ್ರೆಯಲ್ಲಿ ವ್ಯವಸ್ಥೆ ಇಷ್ಟೊಂದು ಹಾಳಾಗಿದ್ಯಾ ಎಂದು ತಿಳಿದು ನಾನು ವಿಡಿಯೋ ಮಾಡಿದೆ. ಈ ವೇಳೆಗೆ ಅಲ್ಲಿದ್ದ ಜನರು ನನ್ನ ಜೊತೆಗೆ ಸೇರಿ ಧೈರ್ಯ ತುಂಬಿದರು.
ಈ ವಿಚಾರವನ್ನು ನಾನು ನರ್ಸ್ ಜೊತೆ ತಿಳಿಸಿದಾಗ ಅವರು ನಮ್ಮ ಜೊತೆ ಗಲಾಟೆ ಮಾಡಿದರು. ನಂತರ ಎಂಡಿ ಸತ್ಯನಾರಾಯಣ ಅವರ ಬಳಿ ಈ ವಿಡಿಯೋವನ್ನು ತೋರಿಸಿದಾಗ ಕೂಡಲೇ ಅವರು ಫೋನ್ ಮಾಡಿ ನರ್ಸ್ ಗಳಿಗೆ ವಿಷಯ ಮುಟ್ಟಿಸಿದರು. ಈ ವೇಳೆ ನನ್ನ ಜೊತೆ ಬಂದಿದ್ದ ಜನರು ವೀಲ್ ಚೇರ್ ಗಳು ಎಲ್ಲ ಎಮರ್ಜೆನ್ಸಿಗೆ ಬಳಕೆ ಆಗುತ್ತಿದೆ. ನಮ್ಮ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಿಗುವುದಿಲ್ಲ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಹೇಳಿಕೊಂಡರು.
ಈ ವೇಳೆ ಪಬ್ಲಿಕ್ ಟಿವಿ ನೀವು ಯಾವುದೋ ದುರುದ್ದೇಶವನ್ನು ಇಟ್ಟಕೊಂಡು ವಿಡಿಯೋ ಮಾಡಿದ್ದೀರಿ ಎನ್ನುವ ಸುದ್ದಿ ಬಂದಿದೆ ಎಂದು ಪ್ರಶ್ನಿಸಿದ್ದಕ್ಕೆ, ವ್ಯವಸ್ಥೆ ಎಷ್ಟು ಹಾಳಾಗಿದೆ ಎನ್ನುವುದನ್ನು ತೋರಿಸಲು ಈ ವಿಡಿಯೋ ಮಾಡಿದ್ದೇನೆ. ನಾನು ನೋಡುವ ಮೊದಲೇ ಅವರು ವಾರ್ಡ್ ರೂಮಿನಿಂದ ಪತಿಯನ್ನು ಎಳೆದುಕೊಂಡೇ ಬಂದಿದ್ದರು. ಎಕ್ಸ್ ರೇ ಮಾಡಿಸಲು ವೀಲ್ ಚೇರ್ ಕೊಡಿ ಎಂದು ಅವರು ಸಾಕಷ್ಟು ಬಾರಿ ಮನವಿ ಮಾಡಿದರೂ ನೀಡದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಿಗೆ ತೋರಿಸಲು ಈ ವಿಡಿಯೋ ಮಾಡಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶ ಇದರಲ್ಲಿ ಇಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಅಮಾನವೀಯ ಘಟನೆ: ರೋಗಿಯ ಪತ್ನಿಯನ್ನೇ ಆರೋಪಿಯನ್ನಾಗಿಸಿದ ಮೆಗ್ಗಾನ್ ಆಸ್ಪತ್ರೆ
https://www.youtube.com/watch?v=zvOMuW_nmN8
https://www.youtube.com/watch?v=FIfROhD1LVc
https://www.youtube.com/watch?v=u4vG0bvZ8Eg




Leave a Reply