ಚಿತ್ರದುರ್ಗ: ರಿಯಲ್ ಸ್ಟಾರ್ ಉಪೇಂದ್ರ ಕೋಟೆನಾಡು ಚಿತ್ರದುರ್ಗದ ಬಿಸಿಲಿನ ತಾಪಕ್ಕೆ ಹೆದರಿ ಒಂದೇ ನಿಮಿಷದಲ್ಲಿ ತಮ್ಮ ಪ್ರಜಾಕೀಯ ಪಕ್ಷದ ರ‍್ಯಾಲಿಯನ್ನು ಮುಗಿಸಿದರು.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದ ವೀರಭದ್ರಸ್ವಾಮಿ ದೇವಾಲಯದಿಂದ ರೋಡ್ ಶೋ ಆರಂಭವಾಗಬೇಕಿತ್ತು. ವೀರಭದ್ರ ಸ್ವಾಮಿ ದೇವಾಲಯದಲ್ಲಿ ಉಪೇಂದ್ರ ಪೂಜೆ ಸಲ್ಲಿಸಿ ರೋಡ್ ಶೋ ವಾಹನ ಏರಿ ತಕ್ಷಣ ಇಳಿದಿದ್ದಾರೆ. ಬಿಸಿಲಿಗೆ ಹೆದರಿ ಒಂದು ನಿಮಿಷದಲ್ಲೇ ರ‍್ಯಾಲಿ ಮುಗಿಸಿ ಹಿಂದಿರುಗಿದರು.

ಉಪೇಂದ್ರ ತಮ್ಮ ಉತ್ತಮ ಪ್ರಜಾಕೀಯ ಪಕ್ಷದ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದರು. ಇಂದು ಬೆಳಗ್ಗೆ 9 ಗಂಟೆಗೆ ರೋಡ್ ಶೋ ನಿಗದಿಯಾಗಿತ್ತು. ಆದರೆ ನಟ ಉಪೇಂದ್ರ ಅರ್ಧ ಗಂಟೆ ತಡವಾಗಿ ರ‍್ಯಾಲಿಗೆ ಆಗಮಿಸಿದರು. ಬಳಿಕ ಉಪೇಂದ್ರ 1 ನಿಮಿಷದಲ್ಲಿ ಮಾತನಾಡಿ ರ‍್ಯಾಲಿ ಮುಗಿಸಿದರು.
https://www.youtube.com/watch?v=_WlVfeGH3sk

Leave a Reply