ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

ಕಲಬುರಗಿ: ಸಿಐಡಿ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆ ಇಂದು ಪಿಎಸ್‍ಐ ಪರೀಕ್ಷೆ ಅಕ್ರಮದ ಕಿಂಗ್‍ಪಿನ್ ಆರ್.ಡಿ.ಪಾಟೀಲ್‍ನನ್ನು ಕೇಂದ್ರ ಕಾರಾಗೃಹ ಸುಪರ್ದಿಗೆ ಒಪ್ಪಿಸಲಾಗಿದೆ. ಜೈಲಿಗೆ ಹೋಗುವ ಮುನ್ನ ಮಾಧ್ಯಮಕ್ಕೆ ಕೈಮುಗಿದು ನಾನು ಒಳ್ಳೆಯದನ್ನೂ ಮಾಡಿದ್ದೀನಿ. ಅದನ್ನೂ ಒಂದಿಷ್ಟು ತೋರಿಸಿ ಅಂತ ಕೇಳಿಕೊಂಡು ಜೈಲಿಗೆ ಹೋಗಿದ್ದಾನೆ.

ಚೌಕ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಸಂಬಂಧಿಸಿದಂತೆ ಆರ್.ಡಿ.ಪಾಟೀಲ್‍ನನ್ನು ಸಿಐಡಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಸಿಐಡಿ ಕಸ್ಟಡಿ ಕಾಲಾವಕಾಶ ಅಂತ್ಯವಾದ ಹಿನ್ನಲೆ ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗೆ ಕಳುಹಿಸಲಾಗಿದೆ. ನಂತರ ಸ್ಟೇಷನ್ ಬಜಾರ್  ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಸಂಬಂಧ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಎಂ.ಎಸ್. ಇರಾನಿ ಕಾಲೇಜ್‍ನಲ್ಲಿ ನಡೆದ ಅಕ್ರಮ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆರ್.ಡಿ. ಪಾಟೀಲ್, ಚಂದ್ರಕಾಂತ್ ಕುಲಕರ್ಣಿ, ಪ್ರಭು, ಶರಣಪ್ಪ ವಿರುದ್ದ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಹುತಾತ್ಮ ಯೋಧ ಹರ್ದೀಪ್ ಸಿಂಗ್ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಭಗವಂತ್ ಮಾನ್

ಇನ್ನು ಆರ್.ಡಿ. ಪಾಟೀಲ್‍ನನ್ನು ಜೈಲಿಗೆ ಕರೆದೊಯ್ಯುವಾಗ ಮತ್ತೆ ಕುಚೇಷ್ಟೆ ಮಾಡಿದ್ದಾನೆ. ಈ ಹಿಂದೆ ಕೊಡಿ, ಕೊಡಿ ಫ್ರೀ ಪ್ರಚಾರ ಕೊಡಿ ಅಂತ ಮಾಧ್ಯಮದ ಕ್ಯಾಮೆರಾಗಳತ್ತ ಬೊಟ್ಟು ಮಾಡಿ ಕಿಚಾಯಿಸಿ ದರ್ಪ ಮೆರೆದಿದ್ದ, ಬಳಿಕ ಕೆಲ ದಿನಗಳ ನಂತರ ದರ್ಪ ಇಳಿದು ಸಾಕು ನನ್ನನ್ನು ಬಿಡ್ರಣ್ಣಾ ಅಂತ ಮಾಧ್ಯಮದ ಮುಂದೆ ಕೋರಿದ್ದ, ಇದೀಗ ಜೈಲಿಗೆ ಕರೆದೊಯ್ಯುವಾಗ ನಾನು ಒಳ್ಳೆಯದನ್ನೂ ಮಾಡಿದ್ದಿನಿ ಅದನ್ನು ಒಂದಿಷ್ಟು ತೋರಿಸಿ ಎಂದು ಮಾಧ್ಯಮದ ಕ್ಯಾಮೆರಾಗಳಿಗೆ ಕೈ ಮುಗಿದ ಕೇಳಿಕೊಂಡು ಗಮನ ಸೆಳೆದಿದ್ದಾನೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಗೂಂಡಾಗಳಿಂದ 15 ಬಾರಿ ಫೈರಿಂಗ್ – ಇಬ್ಬರಿಗೆ ಗಾಯ

Comments

Leave a Reply

Your email address will not be published. Required fields are marked *