IPL: ದೊಡ್ಡ ಅಂತರದ ಗೆಲುವು ಸಾಧಿಸಿ ಇತಿಹಾಸ ಬರೆದ ಆರ್‌ಸಿಬಿ – ಕೆಕೆಆರ್‌ ರೆಕಾರ್ಡ್‌ ಉಡೀಸ್‌

ಚಂಡೀಗಢ: ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಕೆಕೆಆರ್‌ನ ಅತಿ ದೊಡ್ಡ ಗೆಲುವಿನ ಅಂತರದ ದಾಖಲೆಯನ್ನು ಆರ್‌ಸಿಬಿ ಬ್ರೇಕ್‌ ಮಾಡಿದೆ. ಆ ಮೂಲಕ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದೆ.

ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿತು. ಪಿಬಿಕೆಎಸ್‌ ನೀಡಿದ 102 ರನ್‌ಗಳ ಸಾಧಾರಣ ಗುರಿಯನ್ನು ಆರ್‌ಸಿಬಿ 10 ಓವರ್‌ನಲ್ಲೇ ತಲುಪಿತು. ಇನ್ನೂ 60 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿ ಆರ್‌ಸಿಬಿ ಗೆದ್ದು ಬೀಗಿತು.

60 ಎಸೆತಗಳ ಭಾರಿ ಅಂತರದ ಗೆಲುವು, ಐಪಿಎಲ್ ಪ್ಲೇಆಫ್/ನಾಕೌಟ್ ಪಂದ್ಯಗಳಲ್ಲಿ ಬೆನ್ನಟ್ಟುವಾಗ ಸಾಧಿಸಿದ ಅತಿದೊಡ್ಡ ಜಯ ಅಂತರವಾಗಿದೆ. 2024 ರ ಐಪಿಎಲ್ ಫೈನಲ್‌ನಲ್ಲಿ ಎಸ್‌ಆರ್‌ಹೆಚ್ ವಿರುದ್ಧ ಕೆಕೆಆರ್ 57 ಎಸೆತಗಳ ಅಂತರದಲ್ಲಿ ಗುರಿ ಮುಟ್ಟಿ ಗೆದ್ದಿತ್ತು. ಆ ದಾಖಲೆಯನ್ನು ಆರ್‌ಸಿಬಿ ಮುರಿದಿದೆ.

ಐಪಿಎಲ್ 2025 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್‌ ಕಿಂಗ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಸ್ಥಾನ ಪಡೆದುಕೊಂಡಿದೆ. ಗುರುವಾರ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ರಜತ್ ಪಾಟಿದಾರ್ ಟಾಸ್ ಗೆದ್ದು ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ನಂತರ ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು 14.1 ಓವರ್‌ಗಳಲ್ಲಿ ಒಟ್ಟು 101 ರನ್‌ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು.

ನಂತರ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 10 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿ ಗೆದ್ದು ಬೀಗಿತು. ಆ ಮೂಲಕ ಫೈನಲ್‌ಗೆ ಎಂಟ್ರಿ ಕೊಟ್ಟಿತು.

ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಅತಿ ಹೆಚ್ಚು‌ ಬಾಲ್‌ಗಳ ಅಂತರದ ಗೆಲುವು
60 ಎಸೆತಗಳು – ಮುಲ್ಲನ್‌ಪುರದಲ್ಲಿ ಆರ್‌ಸಿಬಿ vs ಪಿಬಿಕೆಎಸ್ (2025)
57 ಎಸೆತಗಳು – ಚೆನ್ನೈನಲ್ಲಿ ಕೆಕೆಆರ್ vs ಎಸ್‌ಆರ್‌ಹೆಚ್ (2024)
38 ಎಸೆತಗಳು – ಅಹಮದಾಬಾದ್‌ನಲ್ಲಿ ಕೆಕೆಆರ್ vs ಎಸ್‌ಆರ್‌ಹೆಚ್ (2024)
33 ಎಸೆತಗಳು – ಬೆಂಗಳೂರಿನಲ್ಲಿ ಎಂಐ vs ಕೆಕೆಆರ್ (2017)
31 ಎಸೆತಗಳು – ಮುಂಬೈನಲ್ಲಿ ಸಿಎಸ್‌ಕೆ vs ಪಿಬಿಕೆಎಸ್ (2008)

ಐಪಿಎಲ್‌ನಲ್ಲಿ ವೇಗವಾಗಿ 100 ಕ್ಕೂ ಹೆಚ್ಚು ರನ್‌ ಗುರಿ ಬೆನ್ನಟ್ಟಿದ ಪಂದ್ಯಗಳು
9.4 ಓವರ್‌ಗಳು – ಆರ್‌ಸಿಬಿ vs ಕೆಕೆಆರ್, ಬೆಂಗಳೂರು, 2015 (112 ರನ್)
9.4 ಓವರ್‌ಗಳು – ಎಸ್‌ಆರ್‌ಹೆಚ್ vs ಎಲ್‌ಎಸ್‌ಜಿ, ಹೈದರಾಬಾದ್, 2024 (166)
10.0 ಓವರ್‌ಗಳು – ಆರ್‌ಸಿಬಿ vs ಪಿಬಿಕೆಎಸ್, ಮುಲ್ಲನ್‌ಪುರ, 2025 (102)
10.1 ಓವರ್‌ಗಳು – ಕೆಕೆಆರ್ vs ಸಿಎಸ್‌ಕೆ, ಚೆನ್ನೈ, 2025 (104)