Photos Gallery: ಸಂಭ್ರಮದಲ್ಲಿ ಮಿಂದೆದ್ದ ಆರ್‌ಸಿಬಿ – ಭಾವುಕ ಕ್ಷಣಗಳು ಕ್ಯಾಮೆರಾ ಕಣ್ಣಿಗೆ ಸೆರೆ!

ʻಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎನ್ನುತ್ತಲೇ 2024ರ ಐಪಿಎಲ್‌ ಲೀಗ್‌ಗೆ ಪದಾರ್ಪಣೆ ಮಾಡಿದ ರಾಯಲ್‌ ಚಾಲೆಂಜರ್ಸ್‌ ತಂಡ ನುಡಿದಂತೆ ನಡೆದಿದೆ. ಮೊದಲ 8 ಪಂದ್ಯಗಳಲ್ಲಿ 7 ಸೋಲುಗಳನ್ನು ಎದುರಿಸಿದ್ದ ಆರ್‌ಸಿಬಿ ಸತತ 6 ಜಯದೊಂದಿಗೆ ಪ್ಲೇ ಆಫ್‌ ಪ್ರವೇಶಿಸುವ ಮೂಲಕ ನಿಜಕ್ಕೂ ಹೊಸ ಅಧ್ಯಾಯ ಸೃಷ್ಟಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪವಾಡ ಸಂಭವಿಸಿದ ರೀತಿಯಲ್ಲಿ ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಆರ್‌ಸಿಬಿ ಗೆಲುವಿನ ವೇಳೆ ಇಡೀ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಅಲೆ ಹೇಗಿತ್ತು? ಯಾರೆಲ್ಲ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು? ಭಾವುಕರಾಗಿ ಸಂಭ್ರಮಿಸಿದ ಆಕ್ಷಣ ಹೇಗಿತ್ತು ಎಂಬುದನ್ನು ಚಿತ್ರಗಳಲ್ಲಿ ಸೆರೆ ಹಿಡಿಯಲಾಗಿದೆ. ಮುಂದೆ ನೋಡಿ…