ಚಿನ್ನಸ್ವಾಮಿ ಮೈದಾನದಲ್ಲಿ ಮಕ್ಕಳಂತೆ ಈಜಾಡಿದ ಡೇವಿಡ್‌!

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಸ್ಟಾರ್‌ ಬ್ಯಾಟರ್‌ ಟಿಮ್‌ ಡೇವಿಡ್‌ (Tim David) ಚಿನ್ನಸ್ವಾಮಿ ಮೈದಾನದ (Chinnaswamy Stadium) ನೀರಿನಲ್ಲಿ ಈಜಾಡಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಈಗ ರಾತ್ರಿ ಭಾರೀ ಮಳೆ ಸುರಿಯುತ್ತಿದೆ. ಆರ್‌ಸಿಬಿ ತಂಡ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಜೋರಾಗಿ ಸುರಿದಿದೆ.

ಮಳೆದ ಸುರಿದ ಹಿನ್ನೆಲೆಯಲ್ಲಿ ಆಟಗಾರರು ಡ್ರೆಸ್ಸಿಂಗ್‌ ಕೊಠಡಿ ಸೇರಿದ್ದರೆ ಟಿಮ್‌ ಡೇವಿಡ್‌ ಮೈದಾನದಲ್ಲಿ ನಿಂತಿದ್ದ ನೀರಿನಲ್ಲ ಈಜಾಡಿದ್ದಾರೆ. ಡೇವಿಡ್‌ ಈಜಾಡುತ್ತಿರುವ ವಿಡಿಯೋವನ್ನು ಆರ್‌ಸಿಬಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದೆ. ಇದನ್ನೂ ಓದಿ: ಮತ್ತೆ ಆರಂಭವಾಗಲಿದೆ IPL – ಬೆಂಗಳೂರಲ್ಲಿ ಪಂದ್ಯದ ದಿನ ಮೆಟ್ರೋ ಸಮಯ ವಿಸ್ತರಣೆ


ಆಸ್ಟ್ರೇಲಿಯಾದ ಟಿಮ್‌ ಡೇವಿಡ್‌ ಅವರನ್ನು ಆರ್‌ಸಿಬಿ ಹರಾಜಿನಲ್ಲಿ 3 ಕೋಟಿ ರೂ. ನೀಡಿ ಖರೀದಿಸಿತ್ತು. ಮೊದಲ ಬಾರಿಗೆ ಐಪಿಎಲ್‌ ಪ್ರತಿನಿಧಿಸುತ್ತಿರುವ ಡೇವಿಟ್‌ 11 ಪಂದ್ಯಗಳಿಂದ 186 ರನ್‌ ಹೊಡೆದಿದ್ದಾರೆ.

ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಸ್ಥಗಿತಗೊಂಡಿದ್ದ ಐಪಿಎಲ್‌ ಪಂದ್ಯಗಳು ಮೇ 17 ರಿಂದ ಆರಂಭವಾಗಲಿದೆ. ಶನಿವಾರ ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಕೋಲ್ಕತ್ತಾ ಮಧ್ಯೆ ಪಂದ್ಯ ನಡೆಯಲಿದೆ. ಈಗಾಗಲೇ 16 ಅಂಕ ಗಳಿಸಿರುವ ಆರ್‌ಸಿಬಿ ನಾಳಿನ ಪಂದ್ಯ ಗೆದ್ದರೆ ಪ್ಲೇ ಆಫ್‌ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.