ಜಯದ ಹಾದಿಗೆ ಮರಳಲು ಆರ್‌ಸಿಬಿ ತವಕ

IPL

ಮುಂಬೈ: ಐಪಿಎಲ್ 15ನೇ ಆವೃತ್ತಿಯ 5 ದಿನದ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಎದುರಾಗಲಿದ್ದು, ಮುಂಬೈನ ಡಾ.ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಈಗಾಗಲೇ ಕಿಂಗ್ಸ್ ಪಂಜಾಬ್ ವಿರುದ್ಧ ಪರಾಭವಗೊಂಡಿರುವ ಆರ್‌ಸಿಬಿ ಗೆಲುವಿನ ಹಾದಿಯತ್ತ ನಡೆಯಲು ಸಜ್ಜಾಗಿದ್ದರೆ, ಇನ್ನೊಂದೆಡೆ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವಿನ ಶುಭಾರಂಭ ಮಾಡಿರುವ ಕೆಕೆಆರ್ ಜಯದ ಯಾತ್ರೆ ಮುಂದುವರಿಸಲು ಸನ್ನದ್ಧವಾಗಿದೆ . ಕೋಲ್ಕತಾ ಈಗಾಗಲೇ 2012 ಮತ್ತು 2014ರಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಆರ್‌ಸಿಬಿ ಮೂರು ಬಾರಿ ಫೈನಲ್ಸ್ ಪ್ರವೇಶಿಸಿ ಟ್ರೋಫಿಯಿಂದ ವಂಚಿತವಾಗಿದೆ. ಒಂದು ಬಾರಿ ರನ್ನರ್ ಅಪ್ ಪ್ರಶಸ್ತಿ ಪಡೆಯುವಲ್ಲಿ ಸೀಮಿತವಾಗಿದೆ. ಇದನ್ನೂ ಓದಿ: ಸ್ಯಾಮ್ಸನ್‌ ಸ್ಫೋಟಕ ಫಿಫ್ಟಿ, ಚಹಲ್‌ ಸ್ಪಿನ್‌ ಕಮಾಲ್‌ – ರಾಜಸ್ಥಾನಕ್ಕೆ 61 ರನ್‌ಗಳ ಭರ್ಜರಿ ಜಯ

KKR

ಈವರೆಗೆ ಉಭಯ ತಂಡಗಳು ಒಟ್ಟು 29 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 13 ಪಂದ್ಯಗಳಲ್ಲಿ ಹಾಗೂ ಕೆಕೆಆರ್ 16 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನೂ ಎರಡು ತಂಡಗಳಲ್ಲೂ ಆಟಗಾರರು ಬದಲಾಗಿದ್ದಾರೆ. ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದ ಆರ್‌ಸಿಬಿ ತಂಡವನ್ನು ದಕ್ಷಿಣ ಆಫ್ರಿಕಾ ತಂಡದ ಫಾಫ್ ಡು ಪ್ಲೆಸಿಸ್ ಹಾಗೂ ಕಳೆದ ಬಾರಿ ಇಯಾನ್ ಮಾರ್ಗನ್ ನೇತೃತ್ವದಲ್ಲಿ ರನ್ನರ್‌ಅಪ್ ಆಗಿದ್ದ ಕೆಕೆಆರ್ ತಂಡವನ್ನು ಶ್ರೇಯಸ್ ಅಯ್ಯರ್ ಅವರು ಮುನ್ನಡೆಸುತ್ತಿದ್ದಾರೆ. ಹಾಗಾಗಿ ಇಂದಿನ ಪದ್ಯದಲ್ಲಿ ಭಾರೀ ಪೈಪೋಟಿ ಎದುರಾಗಲಿದೆ.

Comments

Leave a Reply

Your email address will not be published. Required fields are marked *