RCB Champions | ಈ ಖುಷಿ ನಮ್ಮಿಂದ ತಡೆಯೋಕೆ ಆಗ್ತಿಲ್ಲ – ಅಭಿಮಾನಿ ದೇವ್ರುಗಳಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಬೆಂಗಳೂರು: 17 ವರ್ಷ, 6,256 ದಿನಗಳು, 90,08,640 ನಿಮಿಷಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಚಾಂಪಿಯನ್‌ (RCB Champions) ಆಗಿ ಹೊರಹೊಮ್ಮಿದೆ. ಹೀಗಾಗಿ ಬೆಂಗಳೂರಿನಲ್ಲೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ನಿನ್ನೆಯಿಂದಲೂ ಆರ್‌ಸಿಬಿ ಅಭಿಮಾನಿಗಳು ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ್ದರು. ಎಲ್ಲಿಲ್ಲದ ದೇವರಿಗೂ ಹರಕೆ ಹೊತ್ತಿದ್ದರು. ಅದರಂತೆ ಅಭಿಮಾನಿ ದೇವ್ರುಗಳ ಕನಸು ನನಸಾಗಿದೆ. ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ. ಈ ಖುಷಿ ತಡೆಯಲಾಗದೇ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಅದರ ಒಂದು ಝಲಕ್‌ಗಾಗಿ ವಿಡಿಯೋ ನೋಡಿ…