ಚೆನ್ನೈ: ಐಪಿಎಲ್ ಶುಭಾರಂಭದ ಕನಸು ಹೊತ್ತಿದ್ದ ಆರ್ ಸಿಬಿ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ಸೋಲುಂಡಿದೆ. ಆದರೆ ಪಂದ್ಯದಲ್ಲಿ ತಂಡದ ಬೌಲರ್‍ಗಳ ಪ್ರದರ್ಶನಕ್ಕೆ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇವಲ 70 ರನ್ ಗಳ ಗುರಿಯನ್ನು 18ನೇ ಓವರ್ ವರೆಗೂ ಬೌಲರ್ ಗಳು ಡಿಫೆಂಡ್ ಮಾಡಿದ್ದಾರೆ. ಆದರೆ ಪಿಚ್ ಉತ್ತಮ ಗುಣಮಟ್ಟದಿಂದ ಕೂಡಿರದ ಕಾರಣ ಬ್ಯಾಟ್ಸ್ ಮನ್ ರನ್ ಗಳಿಸಲು ಕಷ್ಟವಾಯಿತು ಎಂದಿದ್ದಾರೆ. ಚೆನ್ನೈ ಪಿಚ್ ಬಗ್ಗೆ ಧೋನಿ ಕೂಡ ಪಂದ್ಯದ ಬಳಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಆರಂಭವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಬ್ಯಾಟಿಂಗ್ ಆರಂಭಿಸಿದ ವೇಳೆ 140 ರಿಂದ 150 ರನ್ ಗುರಿ ನೀಡಿರುವ ಚಿಂತನೆ ನಡೆಸಲಾಗಿತ್ತು. ಆದರೆ ಪಿಚ್ ವರ್ತನೆಯನ್ನು ಊಹೆ ಮಾಡಿರಲಿಲ್ಲ. ಆದರೆ ನಮ್ಮ ಬೌಲರ್ ಗಳು ಹೆಚ್ಚು ರನ್ ನೀಡದೆ ಬೌಲ್ ಮಾಡಿದ್ದಾರೆ ಎಂದಿದ್ದಾರೆ.
ಪಂದ್ಯದ ಸೋಲಿನಿಂದ ತಂಡ ಹೊರ ಬರುತ್ತಾ ಎಂಬುವುದರ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಕನಿಷ್ಠ 120 ರನ್ ಗುರಿ ನೀಡಿದ್ದರೆ ಮತ್ತಷ್ಟು ಹೋರಾಟ ನೀಡಲು ಸಾಧ್ಯವಾಗುತ್ತಿತ್ತು. ಈ ಗೆಲುವಿಗೆ ಚೆನ್ನೈ ಅರ್ಹವಾಗಿದೆ ಎಂದರು. ಇತ್ತ ಪಂದ್ಯದ ಬಳಿಕ ಧೋನಿ ಕೈಗೆ ಬ್ಯಾಡೆಂಜ್ ಹಾಕಿರುವುದನ್ನು ಕೊಹ್ಲಿ ಸೂಕ್ಷ್ಮವಾಗಿ ಗಮನಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

Leave a Reply