ಸಣ್ಣ ಕೈಗಾರಿಕೆಗೆ ಆರ್‌ಬಿಐನಿಂದ ಬಿಗ್ ಗಿಫ್ಟ್- 50 ಸಾವಿರ ಕೋಟಿ ನೆರವು

ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಣ್ಣ ಕೈಗಾರಿಕಾ ಉದ್ಯಮಗಳಿಗೆ 50 ಸಾವಿರ ಕೋಟಿ ರೂಪಾಯಿ ನೆರವು ನೀಡಿದೆ.

ಲಾಕ್‍ಡೌನ್‍ನಿಂದಾಗಿ ಆರ್ಥಿಕವಾಗಿ ಸಾಕಷ್ಟು ಕುಸಿತವಾಗಿದೆ. ಹೀಗಾಗಿ ರಾಜ್ಯಗಳಿಗೆ ಹಣಕಾಸು ನೆರವನ್ನು ಘೋಷಣೆ ಮಾಡಿದೆ. ಕೊರೊನಾ ವೈರಸ್‍ನಿಂದ ದೇಶದ ಮೇಲೆ ಆರ್ಥಿಕವಾಗಿ ತುಂಬಾನೇ ಪರಿಣಾಮ ಬೀರಿದೆ. ಒಂದು ಕಡೆ ಮೊಬೈಲ್ ಬ್ಯಾಂಕಿಂಗ್ ಏರಿಕೆಯಾಗಿದೆ. ಆದರೆ ಆಟೋಮೊಬೈಲ್ ಉತ್ಪಾದನೆ ಕುಸಿತವಾಗಿದೆ. ಸುಮಾರು 1 ಲಕ್ಷ 20 ಸಾವಿರ ಕೋಟಿ ರೂಪಾಯಿ ಹೊಸ ಕರೆನ್ಸಿ ಚಲಾವಣೆಗೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಕೈಗಾರಿಕೆ ಮೇಲೆ ಕೊರೊನಾ ತುಂಬಾ ಪರಿಣಾಮ ಬೀರಿದೆ. ಹೀಗಾಗಿ ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ವಿಶೇಷ ನೆರವು ಘೋಷಣೆ ಮಾಡಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್‌ಬಿಐ ಬರೋಬ್ಬರಿ 50 ಸಾವಿರ ಕೋಟಿ ನೆರವು ನೀಡಿದೆ. ನಬಾರ್ಡ್ ಗೆ 25 ಸಾವಿರ ಕೋಟಿ, ರಾಷ್ಟ್ರೀಯ ಗೃಹ ಬ್ಯಾಂಕ್ (ಎನ್‍ಎಚ್‍ಬಿ)ಗೆ 10 ಸಾವಿರ ಕೋಟಿ, ಭಾರತೀಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಬ್ಯಾಂಕ್(ಎಸ್‍ಐಡಿಬಿಐ)ಗೆ 15 ಸಾವಿರ ಕೋಟಿ ನೆರವು ನೀಡಿದೆ.

ಅಷ್ಟೇ ಅಲ್ಲದೇ ಆರ್‌ಬಿಐನಿಂದ ಹೆಚ್ಚುವರಿ ಕ್ರಮಗಳನ್ನ ಘೋಷಣೆ ಮಾಡಿದ್ದು, ದೇಶದಲ್ಲಿ ಹಣ ಚಲಾವಣೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ವಲಯಗಳಿಗೆ ಹಣ ಚಲಾವಣೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯಗಳಿಗೆ ಆರ್‌ಬಿಐನಿಂದ ಸಾಲ ಪಡೆಯುವ ಮಿತಿಯನ್ನು ಶೇ.60ಕ್ಕೆ ಹೆಚ್ಚಿಸಿದ್ದು, ಕಂಪನಿಗಳಿಗೆ ಸಾಲ ಪಾವತಿಗೆ ಮೂರು ತಿಂಗಳು ವಿನಾಯಿತಿ ನೀಡಿದೆ.

ರಿಯಲ್ ಎಸ್ಟೇಟ್ ಕಂಪನಿಗಳಿಗೆ ನೀಡಲಾಗಿರುವ ಸಾಲದ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಣೆ ಮಾಡಿದೆ. ರಿವರ್ಸ್ ರಿಪೋ ರೇಟ್ ಶೇ.25 ರಷ್ಟು ಕಡಿತ ಮಾಡಿದೆ. ಇನ್ನೂ ಬ್ಯಾಂಕ್‍ಗಳು ಷೇರುದಾರರಿಗೆ ಯಾವುದೇ ಲಾಭಂಶ ನೀಡುವಂತಿಲ್ಲ ಎಂದು ಆರ್‌ಬಿಐ ಘೋಷಣೆ ಮಾಡಿದೆ.

Comments

Leave a Reply

Your email address will not be published. Required fields are marked *