ನಾನೆಂದೂ ಬ್ರಿಗೇಡ್, ಬಿಜೆಪಿಗೆ ಕೈ ಕೊಟ್ಟಿಲ್ಲ, ಅವರೇ ನನ್ನನ್ನು ಬಿಟ್ಟಿದ್ದಾರೆ- ಕೆ ವಿರೂಪಾಕ್ಷಪ್ಪ

ಬೆಂಗಳೂರು: ನಾನು ಬ್ರಿಗೇಡ್ ಹಾಗೂ ಬಿಜೆಪಿಗೆ ಯಾವತ್ತೂ ಕೈಕೊಟ್ಟಿಲ್ಲ. ಬಿಜೆಪಿಯವರೇ ನನ್ನನ್ನ ಕೈಬಿಟ್ಟಿದ್ದಾರೆ. ಹೀಗಾಗಿ ಇಂದು ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿ, ಔಪಚಾರಿಕವಾಗಿ ಕಾಂಗ್ರೆಸ್ ಸೇರಿರುವುದಾಗಿ ಕೆ ವಿರೂಪಾಕ್ಷಪ್ಪ ಹೇಳಿದ್ದಾರೆ.

ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಅವರು, ಹಿಂದುಳಿದ ವರ್ಗದವರಿಗೆ ಬಿಜೆಪಿಯಲ್ಲಿ ಉಳಿಗಾಲವಿಲ್ಲ. ಈಶ್ವರಪ್ಪ ನಮ್ಮನ್ನು ಕೈ ಬಿಟ್ಟಿದ್ದಾರೆ. ಅವರೇನು ಅಂತಾ ನಿಮಗೆ ಗೊತ್ತಿದೆ. ನಾನು ಆಸೆ ಇಟ್ಟುಕೊಂಡಿದ್ದು ಅಲ್ಲಿ ಸಿಗಲಿಲ್ಲ. ಅದಕ್ಕೆ ಕಾಂಗ್ರೆಸ್ ಸೇರಿದ್ದೇನೆ. ನಾನು ಮತ್ತು ಶಿವರಾಮೇ ಗೌಡ ಇಂದು ಮಧ್ಯಾಹ್ನ ಅಧಿಕೃತವಾಗಿ ಪಕ್ಷದ ಕಚೇರಿಯಲ್ಲಿ ಸೇರ್ಪಡೆಯಾಗುತ್ತೇವೆ ಅಂದ್ರು.

ರಾಯಣ್ಣ ಬ್ರಿಗೇಡ್ ಸ್ವಲ್ಪ ಕಾಲ ತಟಸ್ಥವಾಗಿತ್ತು. ಇದೀಗ ಮತ್ತೆ ಬ್ರಿಗೇಡ್ ಗೆ ಚಾಲನೆ ಸಿಗಲಿದೆ. ಬ್ರಿಗೇಡ್ ಒಂದು ಸ್ವಯಂ ಸಂಘಟನೆಯಾಗಿದೆ. ಚುನಾವಣೆ ಅಂತಾ ರಾಯಣ್ಣ ಬ್ರಿಗೇಡ್ ಸಭೆ ಮಾಡಿಲ್ಲ. ಚುನಾವಣೆ ಮುಗಿದ ಬಳಿ ಸಭೆ ಮಾಡ್ತೀವಿ ಅದಕ್ಕೆ ಈಶ್ವರಪ್ಪಗೂ ಆಹ್ವಾನ ಮಾಡ್ತೇವೆ. ಸಭೆಗೆ ಬರೋದು ಬಿಡೋದು ಅವರಿಗೆ ಬಿಟ್ಟಿದ್ದು ಅಂದ್ರು.

ಕೊಪ್ಪಳ, ರಾಯಚೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತೇನೆ. ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಿ, ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಅಂತ ವಿರೂಪಾಕ್ಷಪ್ಪ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ ವಿರೂಪಾಕ್ಷಪ್ಪ ಅವರು ಸಿಂಧನೂರಿನಿಂದ ಟಿಕೆಟ್ ಬೇಡಿಕೆ ಇಟ್ಟಿದ್ದರು. ಆದ್ರೆ ಇದೀಗ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಸೇರಿದ್ದಾರೆ. ಇವರು ಈಶ್ವರಪ್ಪರ ಸಲಹೆಯಂತೆ ರಾಯಣ್ಣ ಬ್ರಿಗೇಡ್ ಮುನ್ನಡೆಸಿದ್ದರು. ಇವರ ಜೊತೆ ಶಿವರಾಮೇ ಗೌಡ ಕೂಡ ಕಾಂಗ್ರೆಸ್ ಸೇರಿದ್ದಾರೆ.

Comments

Leave a Reply

Your email address will not be published. Required fields are marked *