ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ: ರವೀಂದ್ರ ಶ್ರೀಕಂಠಯ್ಯ

ಮಂಡ್ಯ: ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಮಂಡ್ಯ ಜಿಲ್ಲಾಡಳಿತದ ವಿರುದ್ಧ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಓಂ ಶಕ್ತಿಯ ಯಾತ್ರೆಗೆ ಹೋದ 112 ಜನಕ್ಕೆ ಕೊರೊನಾ ಪಾಸಿಟಿವ್ ಆಗಿದೆ. ಅವರಿಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ. ಅನಾಗರಿಕ ನಡುವಳಿಕೆಯಂತೆ ಜಿಲ್ಲಾಡಳಿತ ನಡೆದುಕೊಳ್ಳುತ್ತಿದೆ. ಡಿಸಿಗೆ ಕರೆ ಮಾಡಿದರೆ, ಬೇಜಾವಬ್ದಾರಿತನದ ಉತ್ತರ ಕೊಡುತ್ತಿದ್ದಾರೆ. ಮಂಡ್ಯದಲ್ಲಿ ಜಿಲ್ಲಾಡಳಿತ ಇಷ್ಟರ ಮಟ್ಟಿಗೆ ಕೆಟ್ಟಿದೆ ಎನ್ನುವ ಅರಿವು ನನಗೆ ಇರಲಿಲ್ಲ. ಅಧಿಕಾರಿಗಳ ಜೊತೆ ಸಭೆ ಮಾಡಿಕೊಂಡು ಕುಳಿತ್ತಿದ್ದಾರೆ, ಅವರಿಗೆ ಬಡವರ ಕಷ್ಟ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್‍ನವ್ರು ರೈಲು, ಬಸ್ ಯಾವುದಲ್ಲಾದ್ರೂ ಹೋಗ್ಲಿ, ಆದ್ರೆ ಸಂದರ್ಭ ನೋಡಿ ಪ್ರತಿಭಟನೆ ಮಾಡ್ಲಿ: ಸುಧಾಕರ್

ಈಗಾಗಲೇ ಚೀಫ್ ಸೆಕ್ರೆಟರಿ ಜೊತೆ ಕರೆ ಮಾಡಿ ಮಾತನಾಡಿದ್ದೇನೆ. ಶ್ರೀರಂಗಪಟ್ಟಣದ ಜಿಲ್ಲಾಡಳಿತ ಅವ್ಯವಸ್ಥೆಯಿಂದ ಕೂಡಿದೆ, ಸರ್ಕಾರ ಇದರ ಕಡೆಗೆ ಗಮನ ಹರಿಸುತ್ತಿಲ್ಲ. ಈ ಅನಾಹುತಕ್ಕೆ ಸರ್ಕಾರವೇ ಕಾರಣವಾಗುತ್ತೆ. ಶ್ರೀರಂಗಪಟ್ಟಣದಿಂದ ನೂರಾರು ಬಸ್‍ಗಳು ಓಂ ಶಕ್ತಿಗೆ ಹೊಗುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ತಡೆಯುವ ಕೆಲಸ ಮಾಡುತ್ತಿಲ್ಲ. ಯಾತ್ರೆಯಿಂದ ಬಂದವರನ್ನ ಡೈವರ್ಟ್ ಮಾಡಿ, ಟೆಸ್ಟ್ ಮಾಡಿ ಕ್ವಾರಂಟೈನ್ ಮಾಡಲು ಸೂಚಿಸಿದ್ದೇನೆ ಎಂದರು. ಇದನ್ನೂ ಓದಿ: ಕಟೀಲ್, ಸಿದ್ದರಾಮಯ್ಯಗೆ ಕಂಟಕವಾಗ್ತಾರೆ: ಕೋಟ ಶ್ರೀನಿವಾಸ ಪೂಜಾರಿ

ಜಿಲ್ಲಾಡಳಿತ ಒಟ್ಟಾರೆ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ದೊಡ್ಡ ಹೋರಾಟ ಪ್ರಾರಂಭವಾಗುತ್ತೆ. ನೆಪಕ್ಕೆ ಮಾತ್ರ ಕೋವಿಡ್ ಹೆಸರು ತೆಗೆದುಕೊಳ್ಳುದ್ದಾರಯೇ? ಅಥವಾ ಜನರನ್ನು ಬದುಕಿಸಬೇಕು ಅಂತಾ ಮಾಡುತ್ತಿದ್ದಾರೆ ಅನ್ನೊದು ಗೊತ್ತಾಗುತ್ತಿಲ್ಲ ಎಂದು ಜಿಲ್ಲಾಡಳಿತ ವಿರುದ್ಧ ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *