ಸಾರ್ವಕಾಲಿಕ ಇಷ್ಟಪಡುವ ಹವ್ಯಾಸವನ್ನ ರಿವೀಲ್ ಮಾಡಿದ ಜಡೇಜಾ

ಗಾಂಧಿನಗರ: ಭಾರತ ಕ್ರಿಕೆಟ್ ತಂಡದ ಆಲ್‍ರೌಡರ್ ರವೀಂದ್ರ ಜಡೇಜಾ ಅವರಿಗೆ ಕ್ರಿಕೆಟ್ ಅಷ್ಟೇ ಅಲ್ಲದೆ ವಿವಿಧ ಹವ್ಯಾಸಗಳಿವೆ. ಈ ಪೈಕಿ ಒಂದನ್ನು ಸಾರ್ವಕಾಲಿಕ ಇಷ್ಟಪಡುವ ಹವ್ಯಾಸವೆಂದು ಜಡ್ಡು ಹೇಳಿದ್ದಾರೆ.

ರವೀಂದ್ರ ಜಡೇಜಾ ಕುದುರೆ ಓಡಿಸುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ಇದು ನಾನು ಇಷ್ಟ ಪಡುವ ಸರ್ವಕಾಲಿಕ ಹವ್ಯಾಸ’ ಎಂದು ಬರೆದುಕೊಂಡಿದ್ದಾರೆ.

ಹೆಮ್ಮಾರಿ ಕೊರೊನಾ ವೈರಸ್ ವಿಶ್ವದ ಎಲ್ಲಾ 195 ದೇಶಗಳಿಗೆ ಹರಡಿ ತಲ್ಲಣಗೊಳಿಸಿದೆ. ಇದರಿಂದಾಗಿ ಭಾರತದಲ್ಲಿ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಈ ಸಮಯದಲ್ಲಿ ಭಾರತ ಸೇರಿದಂತೆ ಎಲ್ಲಾ ಕ್ರೀಡಾ ಪಂದ್ಯಾವಳಿಗಳನ್ನು ರದ್ದುಪಡಿಸಲಾಗಿದೆ ಅಥವಾ ಮುಂದೂಡಲಾಗಿದೆ. ಲಾಕ್‍ಡೌನ್‍ನಿಂದಾಗಿ ಎಲ್ಲಾ ಆಟಗಾರರು ತಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಟೀಂ ಇಂಡಿಯಾ ಆಲ್‍ರೌಡಂರ್ ರವೀಂದ್ರ್ ಜಡೇಜಾ ಅವರು ಮಂಗಳವಾರ ತಮ್ಮ ಫಾರ್ಮ್ ಹೌಸ್‍ನಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಜಡೇಜಾ ಕುದುರೆ ಸವಾರಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಡೇಜಾ ಅವರು ಟ್ವೀಟ್‍ನಲ್ಲಿ ವಿಡಿಯೋ ಹಂಚಿಕೊಂಡು, ‘ಲಾಕ್‍ಡೌನ್ ಅನ್ನು ಅನುಸರಿಸಿ, ಮನೆಯಲ್ಲಿಯೇ ಇರಿ ಎಂದು ಜನರಿಗೆ ಮನವಿ ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *