-ಯುವಕನಿಗೆ ಪೊಲೀಸ್ ಅಧಿಕಾರಿ ರವಿ ಚೆನ್ನಣ್ಣನವರ ಸನ್ಮಾನ
ಬೆಂಗಳೂರು: ಬೆಲೆಬಾಳುವ ವಸ್ತುಗಳು ಸಿಕ್ಕರೆ ಸಾಕು ಅದನ್ನು ಯಾರಿಗೂ ತಿಳಿಸದೇ ತಮ್ಮ ಜೇಬಿಗೆ ಹಾಕಿಕೊಳ್ಳುವವರೇ ಹೆಚ್ಚು. ಅಂತಹದರಲ್ಲಿ ಯುವಕರೊಬ್ಬರು ತನೆಗೆ ಸಿಕ್ಕ ಬೆಲೆ ಬಾಳುವ ಐಫೋನ್ ನನ್ನು ಪೊಲೀಸರಿಗೆ ಒಪ್ಪಿಸಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.
ಕೆಂಪೇಗೌಡ ಬಸ್ ನಿಲ್ದಾಣದ ಬಳಿ 60 ಸಾವಿರ ರೂ. ಮೌಲ್ಯದ ಐಫೋನ್ ಮೊಬೈಲ್ ಚಂದ್ರಕುಮಾರ್ ಎಂಬವರ ಕೈಗೆ ಸಿಕ್ಕಿತ್ತು. ಅದನ್ನು ಎತ್ತಿಕೊಂಡು ಬಂದ ಅವರು ಉಪ್ಪಾರಪೇಟೆ ಠಾಣೆಗೆ ತಲುಪಿಸಿದ್ದಾರೆ. ಈ ಕಾರ್ಯವನ್ನು ಪ್ರಶಂಸಿದ ಪಶ್ಚಿಮ ವಿಭಾಗ ಡಿಸಿಪಿ ರವಿ ಚೆನ್ನಣ್ಣನವರ ಅವರು ಚಂದ್ರಕುಮಾರ್ ಗೆ ಗೌರವ ಪತ್ರದೊಂದಿಗೆ ಸನ್ಮಾನಿಸಿದ್ದಾರೆ.
ಶ್ರೀ.ಚಂದ್ರಕುಮಾರ್ ಎಂಬುವರಿಗೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಸುಮಾರು 60,000/-ರೂ ಬೆಲೆ ಬಾಳುವ #iPhone ಮೋಬೈಲ್ ಪೋನ್ ಸಿಕ್ಕಿದ್ದು, ವಾರಸುದಾರರಿಗೆ @upparpeteps ಮುಖಾಂತರ ಹಿಂದಿರುಗಿಸಿರುತ್ತಾರೆ.
ಇವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ @BlrCityPolice ಪರವಾಗಿ ಪ್ರಶಂಸನಾ ಪತ್ರದೊಂದಿಗೆ ಗೌರವಿಸಲಾಯಿತು. 💐👏🏻👏🏻👍🏻 pic.twitter.com/sxqrqfOSbI
— DCP West Bengaluru City (@DCPWestBCP) October 16, 2018
ಇದೊಂದು ಸಾರ್ವಜನಿಕರಿಗೆ ಒಳ್ಳೆ ಸಂದೇಶ ಅನ್ನೊದನ್ನ ಕೂಡ ಹೇಳಿದ್ದಾರೆ. ಇದೀಗ ಚಂದ್ರಕುಮಾರ್ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಒಳ್ಳೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply