ಬೆಂಗಳೂರು: ತನ್ನ ಸಹೋದ್ಯೋಗಿ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಯವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಅವರ ಎರಡನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದರು.
ಸದ್ಯ ರವಿ ಬೆಳಗೆರೆ ವಿಚಾರಣೆ ನಡೆಯುತ್ತಿದ್ದು, ಶನಿವಾರ ರವಿ ಜೊತೆ ಪೊಲೀಸರು ರಾಜರಾಜೇಶ್ವರಿ ನಗರದಲ್ಲಿರೋ ಯಶೋಮತಿಯವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಯಶೋಮತಿ ಅಲ್ಲಿರಲಿಲ್ಲ. ಬಳಿಕ ನಿನ್ನೆ ಸಂಜೆಯೇ ಸಿಸಿಬಿ ಅಧಿಕಾರಿಗಳ ಜೊತೆ ಮಾತನಾಡಿದ ಯಶೋಮತಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇನು ಹೇಳೋದಿಲ್ಲ. ವೈಯಕ್ತಿಕವಾಗಿ ನನ್ನ ಮಾನ ಹರಣ ಆಗ್ತಿದೆ. ಸುನಿಲ್ ನನಗೆ ರವಿ ಕಡೆಯಿಂದ ಪರಿಚಯವಾಗಿದ್ದರು ಅಂತ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಅವರಿಬ್ಬರ ನಡುವೆ ಗಲಾಟೆಯಾಗಿದೆ. ಇದ್ರಲ್ಲಿ ನಾನೇನು ಹೆಚ್ಚು ಹೇಳೋ ವಿಚಾರ ಇಲ್ಲ ಅಂತ ಯಶೋಮತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಶುಕ್ರವಾರ ರಾತ್ರಿಯಿಂದ 2ನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದರು. ಅಲ್ಲದೆ ತನ್ನ ಫೇಸ್ಬುಕ್ ಅಕೌಂಟ್ ಕೂಡ ಅವರು ಬ್ಲಾಕ್ ಮಾಡಿದ್ದಾರೆ. ಅಲ್ಲದೆ ಯಶೋಮತಿ ಯಾವುದೇ ಫೋನ್ ಕರೆಗಳನ್ನ ಸ್ವೀಕರಿಸುತ್ತಿಲ್ಲ ಎಂಬುದಾಗಿ ತಿಳಿದುಬಂದಿತ್ತು.
ಸುನಿಲ್ ಹೆಗ್ಗರವಳ್ಳಿ ಹಾಗೂ ಯಶೋಮತಿ ನಡುವೆ ಅನೈತಿಕ ಸಂಬಂಧವಿತ್ತು. ಈ ಬಗ್ಗೆ ಮನೆ ಕೆಲಸದಾಕೆ ರವಿ ಬೆಳಗೆರೆಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಒಂದು ಬಾರಿ ರವಿ ಬೆಳಗೆರೆ ಮಧ್ಯರಾತ್ರಿ ಮನೆಗೆ ಬಂದಾಗ ಸುನಿಲ್ ಓಡಿಹೋಗಿದ್ದರು ಎಂಬ ಮಾತುಗಳೂ ಕೂಡ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಸುನೀಲ್ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.
https://www.youtube.com/watch?v=OA0RbYjR09k
https://www.youtube.com/watch?v=y8cIVgw5Yno
https://www.youtube.com/watch?v=hEoR4Fec7Ec


















Leave a Reply