ಕೆಜಿಎಫ್ 2: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ರವೀನಾ ಟಂಡನ್?

ಲವು ವರ್ಷಗಳ ನಂತರ ಕನ್ನಡ ಸಿನಿಮಾ ರಂಗಕ್ಕೆ ಬಾಲಿವುಡ್ ತಾರೆ ರವೀನಾ ಟಂಡನ್ ಅವರನ್ನು ಕರೆತಂದಿದ್ದರು ನಿರ್ದೇಶಕ ಪ್ರಶಾಂತ್ ನೀಲ್. ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಅವರದ್ದು ಪ್ರಮುಖ ಪಾತ್ರ ಎಂದು ಹೇಳಲಾಗಿತ್ತು. ಆದರೆ, ಆ ಪಾತ್ರ ಯಾವುದು ಎಂದು ಈವರೆಗೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ಸಿನಿಮಾ ರಿಲೀಸ್ ಆಗಿದೆ. ರವೀನಾ ಪಾತ್ರದ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆದಿವೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಟಂಡನ್ ಅವರು ರೀಮಾ ಸೇನಾ ಹೆಸರಿನ ಪಾತ್ರ ಮಾಡಿದ್ದಾರೆ. ಸಿನಿಮಾದ ಟೀಸರ್ ಬಿಟ್ಟಾಗ ಆ ಪಾತ್ರದ ಬಗ್ಗೆ ಹಲವು ರೀತಿಯಲ್ಲಿ ಕುತೂಹಲ ಮೂಡಿತ್ತು. ಅವಳು ಶಾಸಕಿಯಾ? ಮಂತ್ರಿಯಾ? ಮುಖ್ಯಮಂತ್ರಿಯಾ? ಪ್ರಧಾನಿಯಾ? ಯಾವ ವ್ಯಕ್ತಿಯನ್ನು ಆ ಪಾತ್ರ ಹೋಲುತ್ತದೆ ಹೀಗೆ ಇತ್ಯಾದಿ ಪ್ರಶ್ನೆಗಳು ಎದ್ದಿದ್ದವು. ಇದೀಗ ಎಲ್ಲ ಪ್ರಶ್ನೆಗೂ ಸಿನಿಮಾ ಉತ್ತರ ನೀಡಿದೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

ರವೀನಾ ಟಂಡನ್ ಈ ಸಿನಿಮಾದಲ್ಲಿ ಪ್ರಧಾನ ಮಂತ್ರಿಯಾಗಿ ನಟಿಸಿದ್ದಾರೆ. ಥೇಟ್ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯನ್ನು ಹೋಲುವಂತೆಯೇ ಅವರು ಪಾತ್ರವನ್ನು ಪೋಷಿಸಿದ್ದಾರೆ. ರವೀನಾ ಆಡುವ ಮಾತಿನ ಶೈಲಿ, ಅವರ ಉಡುಗೆ ತೊಡುಗೆ, ಅವರ ಹಾವ ಭಾವ ಹೀಗೆ ಎಲ್ಲವೂ ಇಂದಿರಾ ಗಾಂಧಿಯಂತೆಯೇ ಹೋಲುತ್ತದೆ. ಹಾಗಾಗಿ ಅದು ಇಂದಿರಾ ಗಾಂಧಿ ಅವರನ್ನು ಪ್ರತಿನಿಧಿಸುವ ಪಾತ್ರ ಎಂದು ಹೇಳಲಾಗುತ್ತದೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

ಹಾಗಂತ ಸಿನಿಮಾ ತಂಡವಾಗಲಿ ಅಥವಾ ಸ್ವತಃ ರವೀನಾ ಟಂಡನ್ ಆಗಲಿ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಸಿನಿಮಾ ನೋಡಿದವರು ಮತ್ತು ಇಂದಿರಾ ಗಾಂಧಿ ಅವರ ಬಗ್ಗೆ ಅರಿತವರು ಈ ಪಾತ್ರವನ್ನು ಹೋಲಿಕೆ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್ ಆಗಿದೆ. ರವೀನಾ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡೂ ಆಗಿದೆ.

Comments

Leave a Reply

Your email address will not be published. Required fields are marked *