ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ದಕ್ಷಿಣದ ಸಿನಿಮಾ ಮತ್ತು ಬಾಲಿವುಡ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅಪಾರ ಅಭಿಮಾನಿಗಳನ್ನ ಕೂಡ ರಶ್ಮಿಕಾ ಸಂಪಾದಿಸಿದ್ದಾರೆ. ಇದೀಗ ಅಭಿಮಾನಿಯೊಬ್ಬರು ಎದೆಯ ಮೇಲೆ ಆಟೋಗ್ರಾಫ್ ಕೊಡುವಂತೆ ಕೇಳಿದಾಗ ರಶ್ಮಿಕಾ ನಾಚಿ ನೀರಾಗಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

`ಪುಷ್ಪ’ ಚಿತ್ರದ ಸಕ್ಸಸ್ ನಂತರ ಶ್ರೀವಲ್ಲಿಗೆ ಫ್ಯಾನ್ಸ್ ಬೇಸ್ ಜಾಸ್ತಿ ಆಗಿದೆ. `ಪುಷ್ಪ’ (Pushpa) ಬ್ಯೂಟಿಯನ್ನು ಮೀಟ್ ಆಗಲು ಅದೆಷ್ಟೋ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಲಕ್ಕಿ ಅಭಿಮಾನಿಯೊಬ್ಬರಿಗೆ ರಶ್ಮಿಕಾರನ್ನ ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಎದೆಯ ಮೇಲೆ ಆಟೋಗ್ರಾಫ್ ಬರೆಯುವಂತೆ ಕೇಳಿದ್ದಾರೆ. ಅದಕ್ಕೆ ನಟಿ ಕೂಡ ನಾಚುತ್ತಾ ಆಟೋಗ್ರಾಫ್ ನೀಡಿದ್ದಾರೆ. ನೆಚ್ಚಿನ ನಟಿಯನ್ನ ಭೇಟಿಯಾಗಿರುವುದು ಅಭಿಮಾನಿಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ
View this post on Instagram
ಸದ್ಯ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ `ಪುಷ್ಪ 2′ (Pushpa 2) ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಾಲಿವುಡ್‌ನ ಮೊದಲ ಚಿತ್ರ ಬಿಗ್ ಬಿ ಜತೆಗಿ `ಗುಡ್ ಬೈ’ (Good Bye) ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.

ಬಿಟೌನ್‌ನಲ್ಲಿ ತಮ್ಮ ಮೊದಲ ಸಿನಿಮಾ ರಿಲೀಸ್‌ಗೂ ಮುಂಚೆ ರಶ್ಮಿಕಾ ಮಂದಣ್ಣಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ಬಾಲಿವುಡ್‌ನಲ್ಲಿ ನೆಲೆ ನಿಲ್ಲುವ ಸೂಚನೆ ಕೂಡ ಕೊಟ್ಟಿದ್ದಾರೆ.

Leave a Reply