ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ

ನಾನಿನ್ನೂ ಚಿಕ್ಕವಳು, ಮದುವೆ ಬಗ್ಗೆ ಸದ್ಯಕ್ಕೇನೂ ಯೋಚನೆ ಮಾಡಿಲ್ಲ ಎಂದು ಮೊನ್ನೆ ಮೊನ್ನೆಯಷ್ಟೇ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನೆಲ್ಲೇ ಟಾಲಿವುಡ್ ನಲ್ಲಿ ರಶ್ಮಿಕಾ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಇದೇ ವರ್ಷದ ಕೊನೆಯ ತಿಂಗಳಲ್ಲಿ ಅವರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಇದನ್ನೂ ಓದಿ : ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive


ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಾಗಿ ಓಡಾಡುತ್ತಿರುವ ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಹೊಸ ವರ್ಷವನ್ನು ಒಟ್ಟಿಗೆ ಗೋವಾದಲ್ಲಿ ಆಚರಿಸಿದ್ದರು. ಅಲ್ಲದೇ, ಮುಂಬೈನ ಹೋಟೆಲ್ ನಲ್ಲಿ ತಡರಾತ್ರಿ ಒಟ್ಟಾಗಿ ಊಟ ಮಾಡಿದ ಫೋಟೋಗಳು ಮತ್ತು ವಿಡಿಯೋಗಳು ಸಖತ್ ಸದ್ದು ಮಾಡಿದ್ದವು. ಇಬ್ಬರು ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವ ಸುದ್ದಿ ಕೂಡ ಹಳೆತಾಗುತ್ತಿರುವ ಹೊತ್ತಿನಲ್ಲಿ ವಿಜಯ್ ಕರ್ನಾಟಕದ ಅಳಿಯನಾಗಲಿದ್ದಾರೆ ಎನ್ನುವ ತಾಜಾ ಸುದ್ದಿ ಹೊರ ಬಿದ್ದಿದೆ. ಇದನ್ನೂ ಓದಿ : ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಒಲವಿನ ಉಡುಗೊರೆಗೆ 35 ವರ್ಷ


ಪುಷ್ಪಾ ಸಿನಿಮಾದ ನಂತರ ರಶ್ಮಿಕಾ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಿಂದಲೂ ಅವರು ಆಫರ್ಸ್ ಬರುತ್ತಿವೆ. ಹಾಗಾಗಿ ಈ ವರ್ಷದ ಅಂತ್ಯಕ್ಕೆ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಎನ್ನುವುದು ಹೊಸ ಟ್ವಿಸ್ಟ್. ಇದನ್ನೂ ಓದಿ : ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ


ತಾನು ಇಷ್ಟಪಟ್ಟ ಹುಡುಗನನ್ನೇ ಮದುವೆ ಆಗುವುದಾಗಿ ಈಗಾಗಲೇ ರಶ್ಮಿಕಾ ಮಂದಣ್ಣ ಘೋಷಣೆ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಜತೆಗಿನ ನಿಶ್ಚಾರ್ಥ ಮುರಿದ ನಂತರ ಮದುವೆ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಸದ್ಯ ಹಬ್ಬಿರುವ ಗಾಳಿ ಸುದ್ದಿ ನಿಜವಾಗತ್ತಾ? ಅಥವಾ ಇದು ಗಾಸಿಪ್ ಆಗಿಯೇ ಉಳಿಯತ್ತಾ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಇದನ್ನೂ ಓದಿ : ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?


ಈಗಾಗಲೇ ವಿಜಯ್ ದೇವರಕೊಂಡ ಕುಟುಂಬಕ್ಕೆ ರಶ್ಮಿಕಾ ತೀರಾ ಹತ್ತಿರವಾಗಿದ್ದರಿಂದ, ಹಬ್ಬಗಳು ಮತ್ತು ಕುಟುಂಬದ ಕಾರ್ಯಕ್ರಮಗಳಿಗೆ ವಿಜಯ್ ಕುಟುಂಬ ರಶ್ಮಿಕಾ ಆಹ್ವಾನ ನೀಡುತ್ತಿರುವುದರಿಂದ ನೂರಕ್ಕೆ ನೂರರಷ್ಟು ಈ ಜೋಡಿ ಮದುವೆ ಆಗಲಿದೆ ಎನ್ನುವುದು ಅಸಲಿ ವಿಷ್ಯ.

Comments

Leave a Reply

Your email address will not be published. Required fields are marked *