ವಿಜಯ್ ದೇವರಕೊಂಡ ಅರೆ ನಗ್ನ ಫೋಟೋ ನೋಡಿ ರಶ್ಮಿಕಾ ಹೇಳಿದ್ದು ಹೀಗೆ

`ಗೀತ ಗೋವಿಂದಂ’, ಡಿಯರ್ ಕಾಮ್ರೇಡ್ ಚಿತ್ರದಿಂದ ಅಭಿಮಾನಿಗಳಿಗೆ ಇಷ್ಟವಾಗಿರುವ ವಿಜಯ್ ಮತ್ತು ರಶ್ಮಿಕಾ ಜೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. `ಲೈಗರ್’ ಪೋಸ್ಟರ್ ಲುಕ್ ನೋಡಿ ವಿಶೇಷವಾಗಿ ರಶ್ಮಿಕಾ, ವಿಜಯ್‌ಗೆ ವಿಶ್‌ ಮಾಡಿದ್ದಾರೆ. ರಶ್ಮಿಕಾ ವಿಶ್ ಮಾಡಿರೋ ರೀತಿ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ವಿಜಯ್ ದೇವರಕೊಂಡ ಸದ್ಯ ಸೌತ್ ಅಂಗಳದ ಹಾಟ್ ಟಾಪಿಕ್ ಆಗಿದ್ದಾರೆ. ಲೈಗರ್ ಚಿತ್ರದ ತಮ್ಮ ಲುಕ್ ಬಿಟ್ಟು ಹಲ್‌ಚಲ್ ಎಬ್ಬಿಸಿದ್ದಾರೆ. ಆಗಸ್ಟ್ 25ಕ್ಕೆ ತೆರೆಗೆ ಬರಲಿರುವ ಸಿನಿಮಾಗೆ ರಶ್ಮಿಕಾ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಇನ್ಮುಂದೆ ನಿಮ್ಮ ಹೆಸರು ʻಲೈಗರ್ʼ ಅಂತಾ ವಿಜಯ್‌ಗೆ ವಿಶ್ ಮಾಡಿದ್ದಾರೆ.ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ `ಮಹಾದೇವಿ’ ಖ್ಯಾತಿಯ ಮಾನಸಾ ಜೋಷಿ

ವಿಜಯ್ ಅವರ ʻಲೈಗರ್‌ʼ ಚಿತ್ರದ ಅರೆ ನಗ್ನ ಫೋಟೋಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ವಿಜಯ್, ಇನ್ಮುಂದೆ ನಿಮ್ಮ ಹೆಸರು ಲೈಗರ್ ನಿಮಗೆ ನಮ್ಮ ಪ್ರೀತಿ ಮತ್ತು ಬೆಂಬಲವಿದೆ. ನೀವು ಏನು ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿ. ಆಲ್ ದಿ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ. ಇನ್ನು ರಶ್ಮಿಕಾ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ವಿಜಯ್, ಋಷಿ `ಗೀತ ಗೋವಿಂದಂ’ ಚಿತ್ರದ ಕಾಲದಿಂದಲೂ ನೀವು ನನಗೆ ಸ್ಫೂರ್ತಿಯಾಗಿದ್ದೀರಿ. ಜಗತ್ತು ʻಲೈಗರ್ʼ ಮಿಂಚನ್ನು ನೋಡುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಇದೀಗ ಅವರಿಬ್ಬರ ಪೋಸ್ಟ್ ವೈರಲ್ ಆಗಿದೆ. ಈ ಬಗ್ಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ.

ನಮ್ಮಿಬ್ಬರ ನಡುವೆ ಏನು ಇಲ್ಲ ಎಂದು ಹೇಳಿಕೊಳ್ಳುವ ಈ ಜೋಡಿ. ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಾ ನಮ್ಮ ನಡುವೆ ಪ್ರೀತಿ ಎಂಬ ರೀತಿಯಲ್ಲಿ ಕಾಣಿಸಿಕೊಳ್ತಿರುತ್ತಾರೆ. ಒಟ್ನಲ್ಲಿ ರಶ್ಮಿಕಾ, ವಿಜಯ್ ವಿಶ್ ಮಾಡಿರುವ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Live Tv

Comments

Leave a Reply

Your email address will not be published. Required fields are marked *