ರಶ್ಮಿಕಾ ವಿರುದ್ಧ ಬೇಸರ ಹೊರಹಾಕಿದ ತಂದೆ

ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣದಿಂದಾಗಿ ರಶ್ಮಿಕಾ ಅವರಿಗೆ ತಮ್ಮ ಕುಟುಂಬಸ್ಥರ ಜೊತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮನೆಯ ಕಡೆಗೂ ಗಮನ ಕೊಡು ಮಗಳೇ ಎಂದು ರಶ್ಮಿಕಾ ಅವರ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ರಶ್ಮಿಕಾ ‘ಪೊಗರು’ ಶೂಟಿಂಗ್‍ನಲ್ಲಿದ್ದರು. ನಂತರ ಭಾನುವಾರ ಚೆನ್ನೈಗೆ ಹೋದರು. ಸೋಮವಾರ ರಶ್ಮಿಕಾ ಚೆನ್ನೈಯಿಂದ ನೇರವಾಗಿ ಹೈದರಾಬಾದ್‍ಗೆ ಹೋಗಿದ್ದಾರೆ. ಹೀಗೆ ರಶ್ಮಿಕಾ ದಿನಕ್ಕೊಂದು ರಾಜ್ಯವನ್ನು ಸುತ್ತುತ್ತಿದ್ದಾರೆ. ಹಾಗಾಗಿ ರಶ್ಮಿಕಾರಿಗೆ ತಮ್ಮ ಮನೆಗೆ ಹೋಗಲು ಸಾಧ್ಯವಾಗಿಲ್ಲ. ಇದರಿಂದ ಬೇಸರಕೊಂಡ ಅವರ ತಂದೆ, “ನಮ್ಮ ಮನೆಗೆ ನೀನೇ ಹಿರಿಯ ಮಗಳು, ಹೀಗಾಗಿ ಸ್ವಲ್ವ ಮನೆಯ ಕಡೆಗೂ ಗಮನ ಕೊಡು ಮಗಳೇ” ಎಂದು ಹೇಳಿದ್ದಾರೆ.

ಈ ಬಗ್ಗೆ ರಶ್ಮಿಕಾ ಅವರ ತಾಯಿ ಪ್ರತಿಕ್ರಿಯಿಸಿ, ನಾನು ಯಾವಾಗಲೂ ರಶ್ಮಿಕಾ ಜೊತೆಯಲ್ಲೇ ಇರುತ್ತೇನೆ. ಆದರೆ ಆಕೆಯ ತಂದೆ ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ರಶ್ಮಿಕಾ ಅನೇಕ ಚಿತ್ರಗಳಲ್ಲಿ ನಟಿಸುತ್ತಿರುವುದನ್ನು ನೋಡಿ ನಾನೇ ಆಶ್ಚರ್ಯ ಪಡುತ್ತಿದ್ದೇನೆ. ರಶ್ಮಿಕಾ ನಟಿಸಿದ ಎಲ್ಲಾ ಚಿತ್ರಗಳು ಮುಂದಿನ ವರ್ಷ ಬಿಡುಗಡೆ ಆಗಲಿದೆ. ಹೀಗಾಗಿ ಆ ವರ್ಷ ಅವಳಿಗೆ ತುಂಬಾ ಮುಖ್ಯ. ದೇವರ ಆಶೀರ್ವಾದದಿಂದ ಅವಳಿಗೆ ಉತ್ತಮ ಪಾತ್ರಗಳು ಸಿಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಧ್ರುವ ಸರ್ಜಾ ಅಭಿನಯ ‘ಪೊಗರು’ ಸಿನಿಮಾದ ಚಿತ್ರೀಕರಣಕ್ಕಾಗಿ ರಶ್ಮಿಕಾ ಕರ್ನಾಟಕದಲ್ಲಿದ್ದರು. ಅದನ್ನು ಮುಗಿಸಿಕೊಂಡು ತಕ್ಷಣ ಹೈದರಾಬಾದ್‍ಗೆ ಹೊರಡಿದ್ದಾರೆ. ಸದ್ಯಕ್ಕೆ ಮಹೇಶ್ ಬಾಬು ಅಭಿನಯದ `ಸರಿಲೇರು ನೀಕೆವ್ವರು’ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ರಶ್ಮಿಕಾ ಅವರು ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದ್ದಾರೆ.

Comments

Leave a Reply

Your email address will not be published. Required fields are marked *