ಅಪರೂಪದ ಶ್ವೇತ ನಾಗರ ಪತ್ತೆ!

ತುಮಕೂರು: ಅಪರೂಪದ ಶ್ವೇತ ನಾಗರ ಹಾವು ನಗರ ಹೊರವಲಯದ ಶೆಟ್ಟಿಹಳ್ಳಿಪಾಳ್ಯದಲ್ಲಿ ಪತ್ತೆಯಾಗಿದೆ.

ಶೆಟ್ಟಿಹಳ್ಳಿಪಾಳ್ಯದ ನಿವಾಸಿ, ರೈತ ಶಿವರಾಜು ಎಂಬವರ ತೋಟದಲ್ಲಿ ಶನಿವಾರ ಮಧ್ಯಾಹ್ನ ಶ್ವೇತ ನಾಗರ ಪತ್ತೆಯಾಗಿತ್ತು. ಅದನ್ನು ನೋಡಲು ನೂರಾರು ಜನರು ಅಲ್ಲಿ ಸೇರಿದ್ದರು. ಸ್ಥಳದಲ್ಲಿ ಸೇರಿದ್ದ ವ್ಯಕ್ತಿಯೊಬ್ಬರು ಉರುಗ ತಜ್ಞ ಧನುಷ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಆಗಮಿಸಿದ ಧನುಷ್ ಅವರು ಶ್ವೇತ ನಾಗರ ಹಿಡಿದು, ಕಾಡಿಗೆ ಬಿಟ್ಟಿದ್ದಾರೆ. ಹಾವು ನೋಡಲು ಬಂದಿದ್ದ ಅನೇಕರು ತಮ್ಮ ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಂಡರೆ, ಕೆಲವರು ದೂರದಲ್ಲಿ ನಿಂತು ಕೈ ಮುಗಿದು ನಮಸ್ಕಾರ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *