ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು

1964ರಲ್ಲಿ ತೆರೆಕಂಡ ವೀರ ಸಂಕಲ್ಪ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ರಾಜೇಶ್ ಅವರು ಆನಂತರ ನೂರಾರು ಚಿತ್ರಗಳಿಗೆ ಬಣ್ಣ ಹಚ್ಚಿದರು. ರಾಜೇಶ್ ಅವರ ಅಪರೂಪದ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ ಹಿರಿಯ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀ ನಾರಾಯಣ ಮತ್ತು ಪ್ರಗತಿ ಅಶ್ವತ್ಥ್ ನಾರಾಯಣ್. ಆ ಚಿತ್ರಗಳು ಇಲ್ಲಿವೆ.  ಇದನ್ನೂ ಓದಿ : ರಾಜೇಶ್ ನಟನೆಯ ಸೂಪರ್ ಹಿಟ್ ಹಾಡುಗಳಿವು

ಯಲ್ಲಪ್ಪ ಮತ್ತು ಮುನಿಯಮ್ಮ ದಂಪತಿಯ ಪುತ್ರ. ಜನ್ಮನಾಮ ಶ್ರೀರಾಮ್. ರಾಮನವಮಿಯಂದು ರಾಜೇಶ್ ಹುಟ್ಟಿದ್ದ ಕಾರಣಕ್ಕಾಗಿ ರಾಜೇಶ್ ಅವರನ್ನು ತಂದೆ ತಾಯಿ ಶ್ರೀರಾಮ್ ಎಂದೇ ಕರೆಯುತ್ತಿದ್ದರು. ರಂಗಭೂಮಿ ಮತ್ತು ಸಿನಿಮಾ ರಂಗಕ್ಕೆ ಬರುವ ಮುನ್ನ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಹಂಗಾಮಿ ಬೆರಳಚ್ಚುಗಾರನಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಆಹಾರ ಇಲಾಖೆಯಲ್ಲೂ ಕೆಲ ತಿಂಗಳು ಕಾಲ ಕೆಲಸ ಮಾಡಿದ್ದಾರೆ.  ಇದನ್ನೂ ಓದಿ : ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?

ರಾಜೇಶ್ ನಟರು ಮಾತ್ರವಲ್ಲ, ಬರಹಗಾರ ಕೂಡ ಆಗಿದ್ದರು. ನಿರುದ್ಯೋಗಿ ಬಾಳು, ಸ್ವಪ್ನಜೀವಿ, ರಕ್ತರಾತ್ರಿ, ದೇವಮಾನ ಸೇರಿದಂತೆ ಸಾಕಷ್ಟು ನಾಟಕಗಳನ್ನು ಅವರು ವಿದ್ಯಾಸಾಗರ್ ಹೆಸರಿನಲ್ಲಿ ಬರೆದಿದ್ದಾರೆ. ಕನ್ನಡ ಸಿನಿಮಾ ರಂಗದ ಅತ್ಯಂತ ಶಿಸ್ತಿನ ನಟ, ಜಂಟಲ್ ಮ್ಯಾನ್ ಕಲಾವಿದ ಮತ್ತು ಶುಭ್ರ ಶ್ವೇತವಸ್ತ್ರಧಾರಿ ನಟನೆಂದೇ ರಾಜೇಶ್ ಫೇಮಸ್. ಸಾರ್ವಜನಿಕವಾಗಿ ಎಂದಿಗೂ ಅವರು ಅಶಿಸ್ತಿನಿಂದ ಕಾಣಿಸಿಕೊಂಡವರಲ್ಲ. ಇದನ್ನೂ ಓದಿ : ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ


1964ರಲ್ಲಿ ತೆರೆಕಂಡ ವೀರ ಸಂಕಲ್ಪ ಇವರ ಮೊದಲ ಸಿನಿಮಾ. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
ನಮ್ಮ ಊರು , ಗಂಗೆ ಗೌರಿ , ಸತೀ ಸುಕನ್ಯ , ಬೆಳುವಲದ ಮಡಿಲಲ್ಲಿ , ಕಪ್ಪು ಬಿಳುಪು , ಬೃಂದಾವನ , ಬೋರೆ ಗೌಡ ಬೆಂಗಳೂರಿಗೆ ಬಂದ , ಮರೆಯದ ದೀಪಾವಳ , ಪ್ರತಿಧ್ವನಿ , ಕಾವೇರಿ , ದೇವರ ಗುಡಿ , ಬದುಕು ಬಂಗಾರವಾಯ್ತು , ಸೊಸೆ ತಂದ ಸೌಭಾಗ್ಯ ಸೇರಿದಂತೆ 175ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ, ಪೋಷಕ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ.
‘ಇವನೇ ನನ್ನ ನಲ್ಲ’, ‘ಎಂದೆಂದೂ ಹೀಗೆ ನಗಬೇಕು’, ‘ನೋಟಕೆ ನೋಟ ಮಸೆಯೋನೆ’, ‘ನಂಬಿ ಯಾರನೋ ಮೈಗೆ ಮೈ ಸೋಕಿದಾಗ’, ‘ಎಲ್ಲರ ಕಾಯೋ ದೇವರೆ ನೀನು’, ‘ನಾನೇ ಎಂಬ ಭಾವ ನಾಶವಾಯಿತೋ’, ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕಂಗಳು ವಂದನೆ ಹೇಳಿವೆ’ ಮುಂತಾದ ಜನಪ್ರಿಯ ಹಾಡುಗಳನ್ನು ನೆನೆದಾಗ ತಟ್ಟನೆ ರಾಜೇಶ್ ಕಣ್ಮುಂದೆ ಬಂದು ನಿಲ್ಲುತ್ತಾರೆ.

ಫೋಟೋ ಕೃಪೆ : ಭವಾನಿ ಲಕ್ಷ್ಮೀ ನಾರಾಯಣ ಮತ್ತು ಪ್ರಗತಿ ಅಶ್ವತ್ಥ್ ನಾರಾಯಣ್.

Comments

Leave a Reply

Your email address will not be published. Required fields are marked *