ಶ್ರೀ ಕ್ಷೇತ್ರ ಕೈವಾರದಲ್ಲೊಂದು ಅಪರೂಪದ ಮದುವೆ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿ ನಾರಾಯಣ ತಾತಯ್ಯ ಅವರ ದೇಗುಲದಲ್ಲಿ ನಡೆದ ಅಪರೂಪದ ಮದುವೆ ಎಲ್ಲರ ಗಮನ ಸೆಳೆದಿದೆ.

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವಂತೆ ಕಲ್ಯಾಣನಗರ ಅಂತಲೇ ಖ್ಯಾತಿಯಾಗಿರುವ ಶ್ರೀ ಕ್ಷೇತ್ರ ಕೈವಾರದಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ಈ ವಧು-ವರರಿಬ್ಬರು ಕುಬ್ಜರಾಗಿದ್ದು, ಕುಬ್ಜ ವಧು-ವರರನ್ನು ಕಂಡ ಜನ ಅಪರೂಪ ಎಂಬಂತೆ ಅವರ ನೂತನ ಬಾಳಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಜಿನೋಮಿಕ್ ಸೀಕ್ವೆನ್ಸ್ ಫಲಿತಾಂಶಕ್ಕೆ ಕನಿಷ್ಠ 7-8 ದಿನಗಳು ಬೇಕಾಗುತ್ತದೆ: ಸುಧಾಕರ್

ಈ ಫೋಟೋ ನೋಡಿ ಇದು ಮಕ್ಕಳ ಮದುವೆ ಎಂದುಕೊಳ್ಳಬೇಡಿ. ಗಂಡಿಗೆ 28 ವರ್ಷ ಹೆಣ್ಣಿಗೆ 25 ವರ್ಷ. ನೋಡಲು ವಾಮನ ಮೂರ್ತಿಗಳಂತೆ ಇವರು ಚಿಕ್ಕದಾಗಿ ಕಾಣುತ್ತಾರೆ. ಹಸೆಮಣೆ ಏರಿದ ಗಂಡು ವಿಷ್ಣು ಬೆಂಗಳೂರಿನವರು, ಹೆಣ್ಣು ಜ್ಯೋತಿ ಕೋಲಾರ ಮೂಲದವರು. ಇಬ್ಬರೂ ಪದವೀಧರರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

ವಿಶೇಷವಾಗಿ ಕಂಡ ಈ ಅಪರೂಪದ ಜೋಡಿ ಕ್ಷೇತ್ರಕ್ಕೆ ಬಂದ ಭಕ್ತಾದಿಗಳನ್ನು ಆಕರ್ಷಿಸಿದರು. ಇವರ ದಾಂಪತ್ಯ ಜೀವನ ಅನ್ಯೋನ್ಯವಾಗಿ ಸಂತೋಷವಾಗಿರಲಿ ಎಂದು ಭಕ್ತಾದಿಗಳು ಹಾರೈಸಿದರು. ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ಮದುವೆಯಾದದ್ದು ನಮ್ಮ ಸೌಭಾಗ್ಯವೆಂದು ಈ ನೂತನ ವಧು-ವರರು ಸಂತೋಷವನ್ನು ವ್ಯಕ್ತಪಡಿಸಿದರು. ಇವರು ಅರಿಶಿನ ಸೇವೆಯಲ್ಲಿ ಭಾಗವಹಿಸಿ ತಾತಯ್ಯನವರ ಆಶೀರ್ವಾದವನ್ನು ಪಡೆದರು. ಇದನ್ನೂ ಓದಿ:  ಓಮಿಕ್ರಾನ್ ಇರೋ ದೇಶದ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ: ಸಿಎಂ

Comments

Leave a Reply

Your email address will not be published. Required fields are marked *