ಪ್ರಭಾವಿ ರಾಜಕರಾಣಿಗಳ ಹೆಸರಲ್ಲಿ ವಂಚನೆ, ಅತ್ಯಾಚಾರ- ಹಾವೇರಿಯಲ್ಲಿ ಕಾಮುಕ ಅರೆಸ್ಟ್

ಹಾವೇರಿ: ಜಿಲ್ಲೆಯ ಹಾನಗಲ್ ಪೊಲೀಸರ ಭರ್ಜರಿ ಭೇಟೆಯ ಬಳಿಕ ಇದೀಗ ರಾಜ್ಯವನ್ನೆ ಬೆಚ್ಚಿ ಬೀಳಿಸಿದ ವಿಕೃತ ಕಾಮುಕನೊಬ್ಬನನ್ನು ಸೆರೆ ಹಿಡಿದಿದ್ದಾರೆ.

ಬೆಳಗಾವಿ ಜಿಲ್ಲೆಯ ಪಾಚಾಪುರ ಗ್ರಾಮದ ಮನೋಜ್ ಪವಾರ್ ಬಂಧಿತ ಆರೋಪಿ. ಈತ ಹದಿಹರಿಯದ ಯುವತಿಯರನ್ನು ಪ್ರೀತಿ ಹೆಸರಲ್ಲಿ ನಂಬಿಸಿ ನೀಲಿ ಚಿತ್ರ ರಚನೆಗೆ ಬಳಸುತ್ತಿದ್ದನು. ಹೀಗೆ 100ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದನು ಎನ್ನಲಾಗಿದೆ.

ಪ್ರಭಾವಿ ರಾಜಕಾರಣಿಗಳ ಹೆಸರು ಬಳಸಿಕೊಂಡು ಅಮಾಯಕ ಮಹಿಳೆಯರಿಗೆ ವಂಚಿಸುತ್ತಿದ್ದ ಈತ ಹಾವೇರಿಯ ಖಾಸಗಿ ಶಾಲಾ ಶಿಕ್ಷಕಿಯರ ಮೇಲೆ ಅತ್ಯಾಚಾರವೆಸಗಿದ್ದಾನೆ. 3 ತಿಂಗಳ ಕಾಲ ರಾಜ್ಯದ ನಾನಾ ಭಾಗಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗುತ್ತಿದ್ದನು. ಒಂದು ವೇಳೆ ಅತ್ಯಾಚಾರಕ್ಕೆ ಸಹಕರಿಸದಿದ್ದರೆ ಸಿಗರೇಟ್‍ನಿಂದ ಗುಪ್ತಾಂಗಗಳಿಗೆ ಸುಡುತ್ತಿದ್ದನು ಎಂಬ ಅರೋಪಗಳು ಈತನ ಮೇಲಿವೆ.

ಪೊಲೀಸ್ ಇಲಾಖೆಯ ಸಿಕ್ರೆಟ್ ಕೋಡ್ ವರ್ಡ್‍ಗಳನ್ನ ಬಳಸುತ್ತಿದ್ದ ಈತ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎಂಬುವುದಾಗಿ ತಿಳಿದುಬಂದಿದೆ.

ಸದ್ಯ ಹಾನಗಲ್ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *