ಕಪಿಲ್ ದೇವ್ ನಟರಾಜ ಶಾಟ್ ನೆನಪಿಸಿದ ರಣವೀರ್

ನವದೆಹಲಿ: ಮಾಜಿ ನಾಯಕ ಎಂಎಸ್ ಧೋನಿ ಅವರ ಹೆಲಿಕಾಪ್ಟರ್ ಹೊಡೆತ ಯಾರಿಗೆ ತಾನೇ ಗೊತ್ತಿಲ್ಲ. ಆದೇ ರೀತಿ 1983 ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಅವರ ನಟರಾಜ ಹೊಡೆತ ಅಷ್ಟೇ ಜನಪ್ರಿಯವಾಗಿತ್ತು.

ಈ ಜನಪ್ರಿಯ ಹೊಡೆತವನ್ನು ತನ್ನ ಇನ್‍ಸ್ಟಾಗ್ರಾಮ್‍ಗೆ ಫೋಟೋ ಹಾಕುವ ಮೂಲಕ ನಟ ರಣವೀರ್ ಸಿಂಗ್ ಅವರ ಮತ್ತೆ ನೆನಪಿಸಿದ್ದಾರೆ. ರಣವೀರ್ ಸಿಂಗ್ ಕಪಿಲ್ ದೇವ್ ಅವರ ಜೀವನ ಚರಿತ್ರೆ 83 ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರ ಮಾಡುತ್ತಿದ್ದು, ಅವರ ನಟರಾಜ ಶಾಟ್ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದಾರೆ.

https://www.instagram.com/p/B4tdBtcBVn9/

ಈಗ ಧೋನಿ ಅವರ ಹೆಲಿಕಾಪ್ಟರ್ ಶಾಟ್ ಎಷ್ಟು ಜನಪ್ರಿಯವಾಗಿದೆಯೋ ಅದೇ ರೀತಿಯಲ್ಲಿ ಕಪಿಲ್ ದೇವ್ ಹೊಡೆಯುತ್ತಿದ್ದ ನಟರಾಜ ಶಾಟ್ ಕೂಡ 80 ರ ದಶಕದಲ್ಲಿ ತುಂಬ ಜನಮನ್ನಣೆ ಪಡೆದಿತ್ತು. ಈಗ ಅವರ ಜೀವನ ಚರಿತ್ರೆಯನ್ನು ಕಬೀರ್ ಖಾನ್ ನಿರ್ದೇಶನ ಮಾಡುತ್ತಿದ್ದು, ರಣವೀರ್ ಸಿಂಗ್ ಅವರು ಕಪಿಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗ ಅವರ ನಟರಾಜ ಹೊಡೆತದ ಚಿತ್ರವನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿರುವ ರಣವೀರ್ ನಟರಾಜ ಶಾಟ್ ಎಂದು ಬರೆದುಕೊಂಡಿದ್ದಾರೆ.

ಈ 83 ಚಿತ್ರದ ನಿರ್ದೇಶಕ ಕಬೀರ್ ಖಾನ್ ಕೂಡ ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದು, ಯಾವತ್ತೂ ದೂರದರ್ಶನದಲ್ಲಿ ಪ್ರಸಾರವಾಗದ ಪಂದ್ಯ. ಭಾರತ ಹಿಂದೆಂದೂ ನೋಡಿರದ ವಿಶ್ವ ದಾಖಲೆಯ ಇನ್ನಿಂಗ್ಸ್. ಟನ್‍ಬ್ರಿಡ್ಜ್ ವೇಲ್ಸ್ ನಲ್ಲಿ ಆ ತಂಪಾದ ಗಾಳಿ ಬೀಸಿದ ದಿನದಂದು ಇತಿಹಾಸವನ್ನು ಹೇಗೆ ರಚಿಸಲಾಗಿದೆ ಎಂಬುದನ್ನು ಜಗತ್ತು ಈ ಏಪ್ರಿಲ್‍ನಲ್ಲಿ ನೋಡುತ್ತದೆ ಎಂದು ಬರೆದುಕೊಂಡಿದ್ದಾರೆ.

https://www.instagram.com/p/B4teAONAZ90/?utm_source=ig_embed

ಕಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಸಾಕಿಬ್ ಸಲೀಮ್, ತಾಹೀರ್ ರಾಜ್ ಭಾಸಿನ್, ಹಾರ್ಡಿ ಸಂಧು, ಜೀವಾ, ಅಮ್ಮಿ ವಿರ್ಕ್, ಪಂಕಜ್ ತ್ರಿಪಾಠಿ, ಬೊಮ್ಮನ್ ಇರಾನಿ, ಜತಿನ್ ಸರ್ನಾ ಮತ್ತು ಚಿರಾಗ್ ಪಾಟೀಲ್ ಇತರರು ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಈ ವರ್ಷದ ಮೇ ತಿಂಗಳಿನಲ್ಲಿ ಲಂಡನ್‍ನಲ್ಲಿ ಪ್ರಾರಂಭವಾಗಿತ್ತು.

Comments

Leave a Reply

Your email address will not be published. Required fields are marked *